ಕೇರಳ ಹರತಾಳ: ಬಿಜೆಪಿ ಕಾರ್ಯಕ್ರಮ ಪತ್ರಿಕಾಗೋಷ್ಠಿಗೆ ಪತ್ರಕರ್ತರಿಂದ ಬಹಿಷ್ಕಾರ

Update: 2019-01-03 16:46 GMT

ತಿರುವನಂತಪುರ, ಜ. 3: ಶಬರಿಮಲೆ ಕರ್ಮ ಸಮಿತಿ ಕರೆ ನೀಡಿದ್ದ ಹರತಾಳಕ್ಕೆ ಸಂಬಂಧಿಸಿ ರಾಜ್ಯಾದ್ಯಂತ ಘರ್ಷಣೆ ಸಂಭವಿಸಿರುವುದು ವರದಿಯಾಗಿದೆ. ಹರತಾಳ ಬೆಂಬಲಿಗರು ಪತ್ರಕರ್ತರ ಮೇಲೆ ಕೂಡ ಹಲ್ಲೆ ನಡೆಸಿದ್ದಾರೆ.

ಘರ್ಷಣೆಯಲ್ಲಿ ಏಶ್ಯಾನೆಟ್ ನ್ಯೂಸ್ ಕ್ಯಾಮರಾಮನ್ ವಿ. ಮ್ಯಾಥ್ಯೂ ಗಾಯಗೊಂಡಿದ್ದಾರೆ. ಪಂದಳಂನದಲ್ಲಿರುವ ಸಿಪಿಎಂ ಕಚೇರಿ ಮೇಲೆ ಪ್ರತಿಭಟನಕಾರರು ದಾಳಿ ನಡೆಸಿದ್ದಾರೆ. ಮಲಪ್ಪುರಂನಲ್ಲಿ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸೆಲ್‌ಗಳನ್ನು ಸಿಡಿಸಿದರು. ತಲೆಶ್ಶೇರಿಯಲ್ಲಿ ಬಾಂಬ್ ಎಸೆಯಲಾಗಿದ್ದು, ಕಣ್ಣೂರಿನಲ್ಲಿ ಪ್ರತಿಭಟನಕಾರರು ಇಂಡಿಯನ್ ಕಾಫಿ ಹೌಸ್ ಅನ್ನು ಬಲವಂತವಾಗಿ ಮುಚ್ಚಿಸಲು ಪ್ರಯತ್ನಿಸಿದರು. ಆದರೆ, ಇದನ್ನು ಸಿಪಿಎಂ ಕಾರ್ಯಕರ್ತರು ತಡೆದರು. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೈ ಪತ್ರಿಕಾಗೋಷ್ಠಿ ಸಹಿತ ಬಿಜೆಪಿ ಕಾರ್ಯಕ್ರಮ ಹಾಗೂ ರ್ಯಾಲಿಯ ವರದಿಯನ್ನು ಪತ್ರಕರ್ತರು ಬಹಿಷ್ಕರಿಸಿದರು.

ಪಾಲಕ್ಕಾಡ್‌ನಲ್ಲಿರುವ ಇಎಂಎಸ್ ಗ್ರಂಥಾಲಯಕ್ಕೆ ಪ್ರತಿಭಟನಕಾರರು ಕಿಚ್ಚಿರಿಸಿದ್ದಾರೆ. ಪತ್ತನಂತಿಟ್ಟೆಯ ಪುಲ್ಲಾಡ್‌ನಲ್ಲಿರುವ ಸಿಪಿಎಂ ಕಚೇರಿ ಹಾಗೂ ನೀಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News