×
Ad

ಎಸ್ಕೆಎಸ್ಸೆಸ್ಸೆಫ್: ಮಾನವ ಸರಪಳಿ ಪೋಷ್ಟರ್ ಬಿಡುಗಡೆ ಸಮಾರಂಭ

Update: 2019-01-03 22:59 IST

ಮಂಗಳೂರು, ಜ. 3 : ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪವೆಂಬ ವಾಕ್ಯದಡಿಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಎಸ್ಕೆಎಸ್ಸೆಸ್ಸೆಫ್  ಕಡಬದಲ್ಲಿ  ನಡೆಸುವ ಮಾನವ ಸರಪಳಿಯ ಪೋಷ್ಟರ್ ಬಿಡುಗಡೆಯು ಲಯನ್ಸ್ ಕ್ಲಬ್ ಸೇವಾ ಮಂದಿರದಲ್ಲಿ ನಡೆಯಿತು.

ಸಭೆ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ  ಖಾಸಿಂ ದಾರಿಮಿ ವಹಿಸಿ ಸಭೆಯನ್ನು ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಉಧ್ಘಾಟಿಸಿದರು. ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಕಾರ್ಯದರ್ಶಿ  ಸ್ವದಖತ್ತುಲ್ಲಾ ಫೈಝಿ ವಿಷಯ ಮಂಡಿಸಿದರು.

ಬಿತ್ತಿ ಪತ್ರವನ್ನು ಸೈಯದ್ ಅಮೀರ್ ತಂಙಳ್ ಅನೀಸ್ ಕೌಸರಿ ಅವರಿಗೆ ನೀಡಿ ಬಿಡುಗಡೆ ಮಾಡಿದರು. ಸಭೆಯಲ್ಲಿ ಜಿಲ್ಲಾ ವರ್ಕಿಂಗ್ ಕಾರ್ಯದರ್ಶಿ ಸಿದ್ದೀಖ್ ಅಬ್ದುಲ್ ಖಾದರ್ ಬಂಟ್ವಾಳ, ಜಿಲ್ಲಾ ಉಪಾಧ್ಯಕ್ಷರಾದ ತಾಜುದ್ದೀನ್ ರಹ್ಮಾನಿ, ಹನೀಫ್ ಧೂಮಲಿಕೆ, ಕಾರ್ಯದರ್ಶಿ ಅಬ್ದುಲ್ ರಶೀದ್ ರಹ್ಮಾನಿ, ಮುಹಮ್ಮದ್ ಕುಂಞ ಮಾಸ್ಟರ್, ಟ್ರೇಂಡ್ ಜನರಲ್ ಕನ್ವೀನರ್ ಇಕ್ಬಾಲ್ ಬಾಳಿಲ,  ಆರೀಫ್ ಬಡಕಬೈಲ್, ಫಾರೂಖ್ ಮೂಡಬಿದ್ರೆ,ಸಿದ್ದೀಖ್ ಆಡ್ಕ, ಇಬ್ರಾಹಿಮ್ ಮುಸ್ಲಿಯಾರ್ ವಿಟ್ಲ, ಶಾಫಿ ದಾರಿಮಿ ಸುಳ್ಯ, ಇಸ್ಹಾಕ್ ಫೈಝಿ, ಅಶ್ರಫ್ ಕಡಬ, ರಿಯಾಝ್ ರಹ್ಮಾನಿ ಮಂಗಳೂರು,  ಇರ್ಷಾದ್ ದಾರಿಮಿ ಬಂಟ್ವಾಳ, ನೇಝೀರ್ ಅಝ್ಝರಿ ಬೆಳ್ತಂಗಡಿ, ಝಕರಿಯ್ಯ ಮರ್ಧಾಳ, ಇಬ್ರಾಹಿಮ್ ಕೊಣಾಜೆ, ಮುಹಮ್ಮದ್ ಮುಸ್ಲಿಯಾರ್ ಪುತ್ತೂರು, ಶರೀಫ್ ಮೂಸ ಕುದ್ದುಪದವು, ಮುಂತಾದವರು ಭಾಗವಹಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ ಸ್ವಾಗತಿಸಿ, ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News