ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆ ಎನ್ನುವುದು ಖಾಸಗೀಕರಣ ಭಾಗ: ಬಿ.ಎಂ ಮಾಧವ
ಮಂಗಳೂರು, ಜ.3: ‘ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆ’ ಎನ್ನುವುದು ಬ್ಯಾಂಕಿಂಗ್ ಕ್ಷೇತ್ರವನ್ನು ಖಾಸಗೀಯವರಿಗೆ ವಹಿಸಿಕೊಡುವ ಉದ್ದೇಶವನ್ನು ಹೊಂದಿದೆ. ಈಗ ನಿಟ್ಟಿನಲ್ಲಿ ಎಸ್‌ಬಿಐ ಆಯಿತು ಈಗ ವಿಜಯ ಬ್ಯಾಂಕ್ ಮುಂದಿನ ಸರದಿಯಲ್ಲಿ ಜಿಲ್ಲೆಯ ಇನ್ನುಳಿದ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಸೇರಿದೆ ಎಂದು ಬ್ಯಾಂಕ್ ನೌಕರರ ಸಂಘಗಳ ಒಕ್ಕೂಟ ರಾಜ್ಯದ ಉಪಾಧ್ಯಕ್ಷ ಬಿ.ಎಂ ಮಾಧವ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯ ಬ್ಯಾಂಕ್‌ನ್ನು ನಷ್ಟದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಮತ್ತು ದೇನಾ ಬ್ಯಾಂಕ್ ಜೊತೆ ವಿಲೀನಗೊಳಿಸುವ ಯತ್ನದ ಹಿಂದೆ ಗುಜರಾತಿನ ದೊಡ್ಡ ಉದ್ಯಮಿಗಳಿಗೆ ಬ್ಯಾಂಕ್‌ನ ಹಣಕಾಸು ಸಹಾಯ ಒದಗಿಸುವ ಉದ್ದೇಶವಿದೆ. ಅದಕ್ಕಿಂತಲೂ ಹೆಚ್ಚಾಗಿ ರಿಸರ್ವ್ ಬ್ಯಾಂಕ್‌ನ್ನು ದುರ್ಬಲಗೊಳಿಸುವ ಹುನ್ನಾರವೂ ಅಡಗಿದೆ. ರಿಸರ್ವ್‌ಬ್ಯಾಂಕ್‌ನ ಮೀಸಲು ನಿಧಿಯನ್ನು ಬಳಸಲು ಪ್ರಯತ್ನಿಸಿ ಯಶಸ್ವಿಯಾಗದೆ ಇರುವ ಕೇಂದ್ರ ಸರಕಾರ ಬ್ಯಾಂಕ್‌ಗಳ ವಿಲೀನದ ತಂತ್ರ ನಡೆಸಿದೆ. ವಿಲೀನದ ಬಳಿಕ ಸಹಜವಾಗಿ ನಷ್ಟಕ್ಕೊಳಗಾಗುವ ಬ್ಯಾಂಕ್‌ಗಳನ್ನು ಖಾಸಗಿಯವರ ಕೈಗೆ ಕೊಟ್ಟು ಖಾಸಗೀಕರಣವನ್ನು ಮಾಡುವ ಪ್ರಯತ್ನದಲ್ಲಿ ತೊಡಗಿದೆ. ಉದಾಹರಣೆಗೆ ಎಸ್‌ಬಿಐಯನ್ನು ವಿಲೀನಗೊಳಿಸಿದ ಬಳಿಕ ಎಸ್‌ಬಿಐಯ ಚರಿತ್ರೆಯಲ್ಲಿ ಪ್ರಥಮ ಭಾರಿಗೆ ನಷ್ಟಕ್ಕೀಡಾಯಿತು. ನಷ್ಟವಾದ ಬಳಿಕ ಮುಂದಿನ ಹಂತ ಖಾಸಗೀಕರಣ. ಕರಾವಳಿ ಹಲವು ಸಾರ್ವಜನಿಕ ಉದ್ಯಮದ ಬ್ಯಾಂಕ್‌ಗಳ ಹುಟ್ಟಿಗೆ ಕಾರಣವಾದ ಪ್ರದೇಶ ಈ ಹಿನ್ನೆಲೆಯಲ್ಲಿ ಇಲ್ಲಿನ ಬ್ಯಾಂಕಿಂಗ್ ರಂಗದ ಶಕ್ತಿಯನ್ನು ದುರ್ಬಲಗೊಳಿಸುವ ತಂತ್ರಗಾರಿಕೆಯೂ ಇದರ ಹಿಂದಿದೆ ಎಂದು ಎಂ.ಬಿ.ಮಾದವ ತಿಳಿಸಿದ್ದಾರೆ.
ಈ ಹಿಂದೆ ದೊರೆತ ಮಾಹಿತಿಯ ಪ್ರಕಾರ ಕೆನರಾ, ಕಾರ್ಪೊರೇಶನ್ ಬ್ಯಾಂಕ್ ಕೂಡಾ ಸೇರಿತ್ತು. ಆದರೆ ಇದೀಗ ಕೇವಲ ವಿಜಯ ಬ್ಯಾಂಕ್ ಒಂದನ್ನು ಮಾತ್ರ ತೆಗೆದುಕೊಂಡಿದ್ದಾರೆ. ಇದರ ವಿರುದ್ಧ ಹೋರಾಟ ನಡೆಯದಿದ್ದರೆ ಸಾರ್ವಜನಿಕ ರಂಗದ ಈ ಬ್ಯಾಂಕ್‌ಗಳು ಮತ್ತೆ ಖಾಸಗಿ ರಂಗದ ಕೈ ಸೇರುವ ದಿನಗಳು ದೂರವಿಲ್ಲ ಎಂದು ಎಂ.ಬಿ.ಮಾಧವ ತಿಳಿಸಿದ್ದಾರೆ.