ಜ.13ರಂದು ಮಂಗಳೂರು ಕಂಬಳ
Update: 2019-01-03 23:32 IST
ಮಂಗಳೂರು, ಜ. 3: ನಗರದ ಬಂಗ್ರ ಕೂಳೂರು ಗೋಲ್ಡ್ ಪಿಂಚ್ ಸಿಟಿಯಲ್ಲಿ ಜ.13ರಂದು ಮಂಗಳೂರು ಕಂಬಳ ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಕ್ಯಾ.ಬ್ರಿಜೇಶ್ ಚೌಟ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಹೈಟೆಕ್ ತಂತ್ರಜ್ಞಾನ :- ಕಂಬಳದಲ್ಲಿ ಲೇಸರ್ ಬೀಮ್ ಬಳಕೆಯೊಂದಿಗೆ ಹೈಟೆಕ್ ತಂತ್ರಜ್ಞಾನದ ಹೊನಲು ಬೆಳಕಿನ ಕಂಬಳ ಜ.13ರಂದು ಆರಂಭಗೊಂಡು 14ರಂದು ಸಮಾರೋಪಗೊಳ್ಳಲಿದೆ ಎಂದು ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶಾಸಕ ಉಮಾನಾಥ್ ಕೊಟ್ಯಾನ್, ಕಂಬಳ ಸಮಿತಿಯ ಪದಾಧಿಕಾರಿಗಳಾದ ನಿತೀಶ್ ಶೆಟ್ಟಿ, ಸುಜೀತ್ ಪ್ರತಾಪ್, ಸಚಿನ್ ಶೆಟ್ಟಿ, ಜೋಯಲಸ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.