×
Ad

ಮೀನುಗಾರರ ಹೋರಾಟಕ್ಕೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೆಂಬಲ

Update: 2019-01-04 18:00 IST

ಉಡುಪಿ, ಜ.4: ಕಳೆದ 20 ದಿನಗಳಿಂದ ಕಣ್ಮರೆಯಾದ ಬೋಟು ಸಹಿತ ಏಳು ಮಂದಿ ಮೀನುಗಾರರನ್ನು ಪತ್ತೆ ಹಚ್ಚುವಂತೆ ಆಗ್ರಹಿಸಿ ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಜ.6ರಂದು ಹಮ್ಮಿಕೊಳ್ಳಲಾಗಿರುವ ಹೋರಾಟಕ್ಕೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟವು ಬೆಂಬಲ ವ್ಯಕ್ತಪಡಿಸಿದೆ.

ಮೀನುಗಾರರ ನಾಪತ್ತೆ ತುಂಬಾ ಗಂಭೀರವಾದ ವಿಚಾರವಾಗಿದೆ. ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕ, ಸರಕಾರಗಳು ಇದನ್ನು ಗಂಭಿರವಾಗಿ ತೆಗೆದು ಕೊಂಡು ನಾಪತ್ತೆಯಾದವರನ್ನು ಕಂಡು ಹುಡುಕಲು ಪ್ರಯತ್ನ ಮಾಡಬೇಕಾಗಿದೆ. ಕರಾವಳಿಯ ಜೀವನಾಡಿಯಾದ ಮೀನುಗಾರಿಕೆ ಹಾಗೂ ಮೀನುಗಾರರ ಸಮಸ್ಯೆಯನ್ನು ಬಹೆಗರಿಸುವ ನಿಟ್ಟಿನಲ್ಲಿ ಉಭಯ ಸರಕಾರಗಳು ಮುತುವರ್ಜಿ ವಹಿಸುವಂತೆ ಹಾಗೂ ನಿಗೂಢವಾಗಿ ಕಣ್ಮರೆಯಾದ ಮೀನುಗಾರಿಕಾ ದೋಣಿ ಹಾಗು ಏಳು ಮಂದಿ ಮೀನುಗಾರರನ್ನು ತ್ವರಿತವಾಗಿ ಪತ್ತೆ ಹಚ್ಚಬೇಕು ಎಂದು ಒಕ್ಕೂಟದ ವಕ್ತಾರ ಸಲಾಹುದ್ದೀನ್ ಅಬ್ದುಲ್ಲಾಹ್  ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News