×
Ad

ಮೀನುಗಾರರು ಮರಳಿ ಬರುವಂತೆ ಪ್ರಾರ್ಥನೆ

Update: 2019-01-04 18:03 IST

ಉಡುಪಿ, ಜ.4: ನಾಪತ್ತೆಯಾಗಿರುವ ಏಳು ಮಂದಿ ಮೀನುಗಾರರು ಹಾಗೂ ಬೋಟು ಆದಷ್ಟು ಬೇಗ ಸುರಕ್ಷಿತರಾಗಿ ಪತ್ತೆಯಾಗಲಿ ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ಗುರುವಾರ ಉಡುಪಿ ಸೋದೆ ಮಠದ ಭೂತರಾಜರ ಗುಡಿಯಲ್ಲಿ ಪ್ರಾರ್ಥನೆ ಮಾಡಲಾಯಿತು.

ಪ್ರಾರ್ಥನಾ ವಿಧಿ ವಿಧಾನಗಳನ್ನು ವೆಂಕಟೇಶ ಆಚಾರ್ಯ, ಸೋದೆ ಮಠದ ಉಸ್ತುವಾರಿ ಮಧ್ವೇಶ ತಂತ್ರಿ ನಡೆಸಿ ಕೊಟ್ಟರು. ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯ ತಾರಾನಾಥ್ ಮೇಸ್ತ ಶಿರೂರು, ಉದ್ಯಮಿ ಮುರಳಿಧರ್ ಬಲ್ಲಾಳ್, ಸುಧಾಕರ, ಡೇವಿಡ್, ರಾಘವೇಂದ್ರ ಪ್ರಭು ಕರ್ವಾಲು, ಬಸಂತ್ ಮಲ್ಪೆ, ಐಸಿರಿ ಸುರೇಂದ್ರ ಕುಕ್ಯಾನ್, ಬೋರ್ಕರ್, ಪುತ್ರಾಯ, ಸವಿತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News