ಪ್ರವಾದಿ ನಿಂದನೆ, ಖಾಸಗಿ ವಾಹಿನಿ ಬಹಿಷ್ಕಾರಕ್ಕೆ ಉಳ್ಳಾಲ ದರ್ಗಾ ಸಮಿತಿ ನಿರ್ಧಾರ
ಮಂಗಳೂರು, ಜ.4: ಪ್ರವಾದಿ (ಸ) ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಖಾಸಗಿ ವಾಹಿನಿ ನಿರೂಪಕನ ವಿರುದ್ಧ ಪ್ರತಿಭಟನೆ ರೂಪದಲ್ಲಿ ಉಳ್ಳಾಲ ವ್ಯಾಪ್ತಿಯ ಎಲ್ಲ ಮನೆಗಳಲ್ಲೂ ವಾಹಿನಿ ಬಹಿಷ್ಕರಿಸುವಂತೆ ಉಳ್ಳಾಲ ದರ್ಗಾದಲ್ಲಿ ಇತ್ತೀಚೆಗೆ ನಡೆದ ಆಡಳಿತ ಸಮಿತಿಯ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ನಿರೂಪಕನ ವಿರುದ್ಧ ಉಳ್ಳಾದಲ್ಲೇ 30ಕ್ಕೂ ಅಧಿಕ ದೂರುಗಳನ್ನು ದಾಖಲಿಸಲಾಗಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಉಳ್ಳಾಲದಲ್ಲಿ ವಾಹಿನಿ ಬಹಿಷ್ಕರಿಸುವ ನಿಟ್ಟಿನಲ್ಲಿ ಪ್ರತಿ ಮಸೀದಿಗಳಿಗೆ ದರ್ಗಾದಿಂದ ಲಿಖಿತ ಪತ್ರ ಕಳುಹಿಸಲಾಗಿದೆ.
ಸಭೆಯಲ್ಲಿ ದರ್ಗಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ, ಸದಸ್ಯ ಫಾರೂಕ್ ಉಳ್ಳಾಲ್, ಟ್ರಸ್ಟ್ ಸದಸ್ಯ ಅಯೂಬ್ ಮಂಚಿಲ, ಯು.ಕೆ.ಮುಸ್ತಫಾ ಬಾವ, ಆಸಿಫ್ ಅಬ್ದುಲ್ಲಾ, ಹಮ್ಮಬ್ಬ ಕೋಟೆಪುರ, ಆಲಿಮೋನು, ಹಮೀದ್ ಕೋಡಿ, ಕೆ.ಎನ್.ಮುಹಮ್ಮದ್, ಹಮೀದ್ ಪಾಂಡೇಲ್, ಖಲೀಲ್ ಕಡಪರ, ಯು.ಕೆ. ಅಬ್ಬಾಸ್ ಉಪಸ್ಥಿತರಿದ್ದರು.