ಫರಂಗಿಪೇಟೆ: ಪ್ರವಾದಿ ನಿಂದನೆ ಖಂಡಿಸಿ ಧರಣಿ

Update: 2019-01-04 15:20 GMT

ಫರಂಗಿಪೇಟೆ, ಜ. 4: ಪ್ರವಾದಿ ನಿಂದನೆಗೈದು ಅವಮಾನಿಸಿದ ಸುವರ್ಣ ಕನ್ನಡ ಸುದ್ದಿ ವಾಹಿಣಿಯ ನಿರೂಪಕ ಅಜಿತ್ ಹನುಮಕ್ಕನವರ್ ಮತ್ತು ಸುವರ್ಣ ಸುದ್ದಿವಾಹಿನಿಯ ವ್ಯವಸ್ಥಾಪಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಮೊಹಿದ್ದೀನ್ ಜುಮ್ಮಾ ಮಸೀದಿ ಫರಂಗಿಪೇಟೆ ಇದರ ನೇತೃತ್ವದಲ್ಲಿ  ಬದ್ರಿಯಾ ಮಸೀದಿ ಅಮೆಮಾರ್, ಅರಫಾ ಜುಮ್ಮಾ ಮಸೀದಿ ಕುಂಪನಮಜಲ್ ಹಾಗೂ ಗ್ರಾಮದ ವಿವಿಧ ಮಸೀದಿ ಆಡಳಿತ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಫರಂಗಿಪೇಟೆಯಲ್ಲಿ ಪ್ರತಿಭಟನಾ ಧರಣಿ ನಡೆಯಿತು.

ಈ ಸಂದರ್ಭ ಮಾತನಾಡಿದ ಫರಂಗಿಪೇಟೆ ಮಸೀದಿ ಮುದರಿಸ್ ಅಬ್ಬಾಸ್ ದಾರಿಮಿ ಪ್ರವಾದಿ ನಿಂದನೆಗೈದ ಅಜಿತ್ ಓರ್ವ ಪತ್ರಕರ್ತನಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಇಸ್ಲಾಮ್ ಹಾಗೂ ಇತರ ಧರ್ಮದ ವಿಷಯಗಳನ್ನು ಕಳಿತು ಮಾತನಾಡಬೇಕಾಗಿದೆ, ಮುಸ್ಲಿಮರು ತನ್ನ ಜೀವ ಹಾಗೂ ಜೀವನಕ್ಕಿಂತ ಹೆಚ್ಚಾಗಿ ಪ್ರೀತಿಸುವ ಪ್ರವಾದಿಯ ನಿಂದನೆಯನ್ನು ಸಹಿಸುವವರಲ್ಲ ಎಂದು ಹೇಳಿದರು.

ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅಮೆಮಾರ್ ಮಸೀದಿ ಮುದರಿಸ್ ಅಬೂಸ್ವಾಲಿಹ್ ಪೈಝಿ ಪರಮಹಂಸ ಮದುವೆಯಾಗಿದ್ದು ಐದನೇ ವಯಸ್ಸಿನ ಬಾಲೆಯನ್ನಾಗಿದ್ದು ಈ ಬಗ್ಗೆ ಇಲ್ಲಿಯವರೆಗೆ ಯಾವ ಮುಸ್ಲಿಮರು ಅವಮಾಸಲಿಲ್ಲ. ಪ್ರವಾದಿ ಮಹಮ್ಮದ್ (ಸ ಅ) ರವರು ಯಾವ ಸನ್ನಿವೇಶ ಯಾಕಾಗಿ ಮದುವೆಯಾಗಿದ್ದಾರೆ ಎಂಬುವುದನ್ನು ಅರಿತರೆ ಎಲ್ಲದಕ್ಕೂ ಸ್ಪಷ್ಟ ಉತ್ತರ ಸಿಗುತ್ತದೆ ಎಂದು ಹೇಳಿದ ಅವರು ಪ್ರವಾದಿ ನಿಂದನೆಗೈದು ಮುಸ್ಲಿಮರನ್ನು ಪ್ರಚೋದಿಸಿ ಕೋಮು ಗಲಭೆ ನಡೆಸುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಹೇಳಿದರು.

ಕಂಪನಮಜಲ್ ಮಸೀದಿ ಮುದರಿಸ್ ಈ ಸಂದರ್ಭ ಮಾತನಾಡಿದರು. ಪ್ರತಿಭಟನಾ ಧರಣಿಯ ನೇತೃತ್ವವನ್ನು ಫರಂಗಿಪೇಟೆ ಮಸೀದಿ ಅಧ್ಯಕ್ಷ ಮೊಹಮ್ಮದ್ ಬಾವ ವಹಿಸಿದ್ದರು, ಪ್ರಾಸ್ತಾವಿಕ ಮತ್ತು ಸ್ವಾಗತ ಉಪಾಧ್ಯಕ್ಷ ಉಮರ್ ಫಾರೂಕು ಮಾಡಿದರು. ಪ್ರ ಕಾರ್ಯದರ್ಶಿ ಯೂಸುಫ್ ಅಲಂಕಾರ್, ಕೊಶಾಧಿಕಾರಿ ಮಜೀದ್, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್, ಅಮೆಮಾರ್ ಮಸೀದಿ ಅಧ್ಯಕ್ಷ ಉಮರಬ್ಬ, ಪ್ರ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್, ಕುಂಪನಮಜಲ್ ಮಸೀದಿ ಖತೀಬ್ ನಾಸಿರ್ ದಾರಿಮಿ, ಅಧ್ಯಕ್ಷ ಬುಖಾರಿ, ಉಪಾಧ್ಯಕ್ಷ ಇಕ್ಬಾಲ್ ದರ್ಬಾರ್,  ಕುಂಜತ್ಕಳ ಮಸೀದಿ ಖತೀಬ್ ಅಬೂಬಕ್ಕರ್ ಪೈಝಿ, ಮಸೀದಿ ಅಧ್ಯಕ್ಷ ಅಶ್ರಫ್, ಕಾರ್ಯದರ್ಶಿ ಆಬಿದ್ ಆಲಿ, ಉಪಾಧ್ಯಕ್ಷ ಹನೀಫ್, ಕೋಶಾಧಿಕಾರಿ ಬಶೀರ್, ಹತ್ತನೇಮೈಲ್ ಕಲ್ಲು ಮಸೀದಿ ಖತೀಬ್ ಮುಸ್ತಫಾ ಪೈಝಿ, ಮಸೀದಿ ಅಧ್ಯಕ್ಷ ಮೊಹಮ್ಮದ್ ಆಲಿ, ಉಪಾಧ್ಯಕ್ಷ ಹಮೀದ್, ಪಿ.ಎಫ್.ಐ ಬಂಟ್ವಾಳ ಕಾರ್ಯದರ್ಶಿ ಸೆಲೀಮ್, ಪುದು ಗ್ರಾಪಂ ಸದಸ್ಯ ಹಾಶಿರ್, ನಝೀರ್, ರಝಾಕ್, ರಿಯಾಝ್, ಝಾಹಿರ್, ಮತ್ತು  ಮುಸ್ತಫ ಮೇಲ್ಮನೆ, ಫಯಾಝ್, ಅಬೂಬಕ್ಕರ್ ಮತ್ತಿತರರು ಉಪಸ್ಥಿತರಿದ್ದರು ಬಳಿಕ ಬಂಟ್ವಾಳ ಉಪನಿರೀಕ್ಷಕರ ಮುಖಾಂತರ ಗೃಹ ಸಚಿವರಿಗೆ ಮನವಿ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News