ಮಕ್ಕಳಿಗೆ ಶಿಕ್ಷಣದ ಜೊತೆ ತಿಳುವಳಿಕೆ ನೀಡಿ: ಕುದಿ ವಸಂತ್ ಶೆಟ್ಟಿ

Update: 2019-01-04 17:22 GMT

ಹಿರಿಯಡ್ಕ, ಜ.4: ಪೋಷಕರ ಜವಾಬ್ದಾರಿ ಮಕ್ಕಳಿಗೆ ಶಿಕ್ಷಣವನ್ನು ಕೊಡು ವುದು. ಆ ಶಿಕ್ಷಣವನ್ನು ಸರಿಯಾಗಿ ಕೊಡುವುದರ ಜೊತೆಗೆ ಮಗುವಿಗೆ ತಿಳಿವಳಿಕೆ ಕೊಡುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಕುದಿ ಶ್ರೀವಿಷ್ಣುಮೂರ್ತಿ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಕುದಿ ವಸಂತ್ ಶೆಟ್ಟಿ ಹೇಳಿದ್ದಾರೆ.

ಕಾಜಾರಗುತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮತ್ತು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಇತ್ತೀಚೆಗೆ ಮಾತನಾಡುತಿದ್ದರು.

ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಆಧುನಿಕ ಬದಲಾವಣೆಯಾಗುತ್ತಿದೆ. ಬದಲಾವಣೆಯ ಗಾಳಿ ಬೀಸುತ್ತಿದೆ. ಅದನ್ನು ನಾವು ಗಮನಿಸುತ್ತಿರಬೇಕು. ಹಳೆ ವಿದ್ಯಾರ್ಥಿಗಳು ಮತ್ತು ಊರವರ ಸಹಕಾರದಿಂದ ಯಾವುದೇ ಸಂಸ್ಥೆಯನ್ನು ಪ್ರಗತಿಯತ್ತ ಕೊಂಡೊಯ್ಯಬಹುದಾ ಗಿದೆ ಎಂದರು.

ಕಾಜಾರಗುತ್ತು ಶ್ರೀದಶಾವತಾರ ಯಕ್ಷಗಾನ ಕಲಾ ಮಂಡಳಿಯ ಭಾಗವತ ಅನಂತಪದ್ಮನಾಭ ಭಟ್, ನಿವೃತ್ತ ಯೋಧರಾದ ಕಾಜಾರಗುತ್ತುವಿನ ಉಪೇಂದ್ರ ನಾಯಕ್ ಹಾಗೂ ರಮೇಶ್ ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ಕೊಡಿಬೆಟ್ಟು ಗ್ರಾಪಂ ಅಧ್ಯಕ್ಷ ಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ತಾಪಂ ಸದಸ್ಯರಾದ ಸಂಧ್ಯಾ ಕಾಮತ್, ಲಕ್ಷ್ಮೀನಾರಾಯಣ ಪ್ರಭು, ನಿವೃತ್ತ ಮುಖ್ಯೋಪಾಧ್ಯಾಯ ಮಲ್ಪೆರಾಘವೇಂದ್ರ ಹಿರಿಯಡ್ಕ, ಕೊಡಿಬೆಟ್ಟು ಗ್ರಾಪಂ ಸದಸ್ಯ ಉಮೇಶ್ ಬೋರ್ಕರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿತೀಶ್ ಶೆಟ್ಟಿ, ಗೌರವಾಧ್ಯಕ್ಷ ಅನಿಲ್ ಶೆಟ್ಟಿ, ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ದೇವೇಂದ್ರ ನಾಯಕ್, ಉಪಾಧ್ಯಕ್ಷೆ ಗೀತಾ, ಶಾಲಾ ಮುಖ್ಯೋಪಾಧ್ಯಾ ಯಿನಿ ಗೌರಿ ಕೆ., ಶಿಕ್ಷಕಿಯರಾದ ಗಾಯತ್ರಿ, ಜಯಲಕ್ಷ್ಮಿ ಉಪಸ್ಥಿತರಿದ್ದರು. ಚಂದ್ರಿಕಾ ನಾಗರಾಜ್ ಸ್ವಾಗತಿಸಿದರು. ಶಿಕ್ಷಕಿ ಜಯಂತಿ ವಂದಿಸಿದರು. ತಿಲಕ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News