ಮೀನುಗಾರರ ಹೋರಾಟಕ್ಕೆ ಎಸ್‌ಡಿಪಿಐ ಬೆಂಬಲ
ಉಡುಪಿ, ಜ.4: ಕಳೆದ 20 ದಿನಗಳ ಹಿಂದೆ ಮೀನುಗಾರಿಕೆ ತೆರಳಿ ನಾಪತ್ತೆ ಯಾಗಿರುವ ಏಳು ಮಂದಿ ಮೀನುಗಾರರು ಪತ್ತೆ ಹಚ್ಚುವಂತೆ ಆಗ್ರಹಿಸಿ ಮೀನು ಗಾರರ ವಿವಿಧ ಸಂಘಟನೆಗಳು ಜ.6ರಂದು ಕರೆ ನೀಡಿರುವ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ ಸಂಪೂರ್ಣ ಬೆಂಬಲ ನೀಡಿದೆ ಎಂದು ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಆಸೀಫ್ ಕೋಟೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂದ್‌ಗೆ ಸಹಕರಿಸಲು ಮನವಿ
ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ ಜ.6ರಂದು ನಡೆಯುವ ರಾಷ್ಟ್ರೀಯ ಹೆದ್ದಾರಿ ಬಂದ್ ವೇಳೆ ಸಾರ್ವಜನಿಕರು ಸಹಕರಿಸ ಬೇಕಾಗಿ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಮನವಿ ಮಾಡಿದ್ದಾರೆ.
ಆದಿವುಡುಪಿ- ಮಲ್ಪೆ ಮಾರ್ಗ ಮತ್ತು ಅಂಬಲಪಾಡಿ-ಕಿದಿಯೂರು ಮಾರ್ಗದಲ್ಲಿ ಸಂಚರಿಸುವ ಬಸ್ ಮತ್ತು ಇನ್ನಿತರ ವಾಹನಗಳು ಹಾಗೂ ಸಾರ್ವಜನಿಕರು ಪರ್ಯಾಯ ಮಾರ್ಗವನ್ನು ಬಳಸಿಕೊಂಡು ಬಂದ್‌ಗೆ ಸಹಕರಿಸಬೇಕು. ವೈದ್ಯಕೀಯ ಚಿಕಿತ್ಸೆ, ಮೆಡಿಕಲ್ ಮತ್ತು ತೀರ ಅಗತ್ಯದ ಕಾರ್ಯ ಕ್ರಮಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.