ಅಯ್ಯಪ್ಪ ಸ್ವಾಮಿ ಚಿತ್ರ ವಿರೂಪ: ದೂರು
Update: 2019-01-04 23:06 IST
ಉಡುಪಿ, ಜ.4: ಸಾಮಾಜಿಕ ಜಾಲಾತಾಣಗಳಲ್ಲಿ ಅಯ್ಯಪ್ಪ ಸ್ವಾಮಿ ಮೂರ್ತಿಯ ಚಿತ್ರವನ್ನು ವಿರೂಪಗೊಳಿಸಿರುವ ಅವಹೇಳನ ಮಾಡಿರುವ ವ್ಯಕ್ತಿಯ ವಿರುದ್ಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ.2ರಂದು ರಾತ್ರಿ ಆರೋಪಿಯು ಆತನ ಫೇಸ್‌ಬುಕ್ ಖಾತೆಯಲ್ಲಿ ಅಯ್ಯಪ್ಪಸ್ವಾಮಿ ಮೂರ್ತಿಯ ಚಿತ್ರವನ್ನು ವಿರೂಪಗೊಳಿಸಿ, ಹಿಂದೂ ಭಾವನೆಗಳಿಗೆ ದಕ್ಕೆ ತರುವಂತೆ ತಮಿಳು ಭಾಷೆಯಲ್ಲಿ ನಿಂದಿಸಿ, ಪ್ರಚೋದಿಸಿ, ಬರಹ ಮತ್ತು ಫೋಟೋವನ್ನು ಹಾಕಿದ್ದಾನೆ. ಅಲ್ಲದೇ ಆತನ ವಾಟ್ಸ್ಅಪ್ ಸ್ಟೇಟಸ್‌ನಲ್ಲಿಯೂ ಕೂಡ ಇದೇ ರೀತಿಯ ಚಿತ್ರವನ್ನು ಹಾಕಿದ್ದಾನೆ ಎಂದು ಕರ್ನಾಟಕ ಕಾನೂನು ಕಾಲೇಜು ಘಟಕ ರಾಮಸೇನಾ ರಾಜ್ಯಾಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.