ಅಸ್ತಾನಾ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಜಂಟಿ ನಿರ್ದೇಶಕ ವರ್ಗಾವಣೆ

Update: 2019-01-04 17:44 GMT

ಹೊಸದಿಲ್ಲಿ,ಜ.4: ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ವಿರುದ್ಧದ ಗಂಭೀರ ಭ್ರಷ್ಟಾಚಾರ ಆರೋಪಗಳ ತನಿಖೆಯ ನೇತೃತ್ವ ವಹಿಸಿದ್ದ ತನಿಖಾ ಸಂಸ್ಥೆಯ ಜಂಟಿ ನಿರ್ದೇಶಕ ವಿ.ಮುರುಗೇಶನ್ ಅವರನ್ನು ಕಲ್ಲಿದ್ದಲು ಹಗರಣ ಪ್ರಕರಣಗಳ ತನಿಖೆಗೆ ವರ್ಗಾಯಿಸಲಾಗಿದೆ.

ಕಲ್ಲಿದ್ದಲು ಹಗರಣ ಪ್ರಕರಣಗಳ ತನಿಖೆಯನ್ನು ತ್ವರಿತಗೊಳಿಸುವ ಪ್ರಯತ್ನಗಳ ಅಂಗವಾಗಿ ಮರುಗೇಶನ್ ಅವರನ್ನು ವರ್ಗಾವಣೆಗೊಳಿಸಲಾಗಿದೆ ಎಂದು ಸುದ್ದಿಸಂಸ್ಥೆಗೆ ಲಭ್ಯವಾಗಿರುವ ಆದೇಶದಲ್ಲಿ ಹೇಳಲಾಗಿದೆ. ಅವರನ್ನು ಸಿಬಿಐ ಕೇಂದ್ರ ಕಚೇರಿಯ ಜಂಟಿ ನಿರ್ದೇಶಕರ ಹೆಚ್ಚುವರಿ ಹೊಣೆಯಿಂದಲೂ ಬಿಡುಗಡೆಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮುರುಗೇಶನ್ ಅವರ ಬಳಿಯಿದ್ದ ಹೊಣೆಯನ್ನು ಈಗ ಜಂಟಿ ನಿರ್ದೇಶಕ ಜಿ.ಕೆ ಗೋಸ್ವಾಮಿ ಅವರಿಗೆ ನೀಡಲಾಗಿದೆ. ದಿಲ್ಲಿ ವಲಯದ ಭ್ರಷ್ಟಾಚಾರ ನಿಗ್ರಹ ಘಟಕವನ್ನು ನೋಡಿಕೊಳ್ಳುತ್ತಿದ್ದ ಇನ್ನೋರ್ವ ಜಂಟಿ ನಿರ್ದೇಶಕ ವಿನೀತ್ ವಿನಾಯಕ್ ಅವರನ್ನೂ ವರ್ಗ ಮಾಡಲಾಗಿದ್ದು,ಅವರ ಸ್ಥಾನಕ್ಕೆ ಹೆಚ್ಚುವರಿ ನಿರ್ದೇಶಕ ಪ್ರವೀಣ ಸಿನ್ಹಾ ಅವರನ್ನು ನೇಮಕಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News