ಶೋಭಾರಿಂದ ರಕ್ಷಣಾ ಸಚಿವರ ಭೇಟಿ
Update: 2019-01-04 23:16 IST
ಉಡುಪಿ, ಜ.4: ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟಿನಲ್ಲಿದ್ದ ಏಳು ಮಂದಿ ಮೀನುಗಾರರ ಪತ್ತೆ ಕಾರ್ಯ ತೀವ್ರಗೊಂಡಿದ್ದು, ಇದೀಗ ಕೇಂದ್ರ ರಕ್ಷಣಾ ಇಲಾಖೆಯಿಂದಲೂ ಪತ್ತೆ ಕಾರ್ಯಕ್ಕೆ ನೆರವು ಲಭಿಸಿದೆ ಎಂದು ಉಡುಪಿ ಸಂದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ರನ್ನು ಭೇಟಿ ಮಾಡಿದ ಶೋಭಾ, ನಾಪತ್ತೆಯಾದ ಮೀನುಗಾರರ ತ್ವರಿತ ಪತ್ತೆ ಹಚ್ಚಲು ಸಹಕರಿಸುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ರಕ್ಷಣಾ ಸಚಿವೆ ತಕ್ಷಣವೇ ಮಹಾರಾಷ್ಟ್ರ ಸರಕಾರ ಕೋಸ್ಟ್‌ಗಾರ್ಡ್ಸ್ ಮತ್ತು ಭಾರತೀಯ ನೌಕಾಸೇನೆಯನ್ನು ಸಂಪರ್ಕಿಸಿ, ಕಣ್ಮರೆಯಾಗಿರುವ ಮೀನುಗಾರರ ತ್ವರಿತ ಪತ್ತೆ ಕಾರ್ಯಕ್ಕೆ ಕೈ ಜೆಡಿಸುವಂತೆ ನಿರ್ದೇಶನ ನೀಡಿದರು.
ಕಾಪು ಶಾಸಕ ಹಾಗೂ ಮೀನುಗಾರ ಮುಂದಾಳು ಲಾಲಾಜಿ ಆರ್. ಮೆಂಡನ್ ರಕ್ಷಣಾ ಸಚಿವೆ ಅವರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಸಂಸದ ರೊಂದಿಗಿದ್ದರು.