ಪ್ರವಾದಿ ನಿಂದನೆ: ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಪಲ್ಲಮಜಲು ಜಮಾಅತ್ ವತಿಯಿಂದ ಮನವಿ
ಬಂಟ್ವಾಳ, ಜ. 4: ಪ್ರವಾದಿ ನಿಂದನೆ ಹಾಗೂ ಧಾಮೀಕ ಭಾವನೆಗೆ ಧಕ್ಕೆಯುಂಟು ಮಾಡಿರುವ ಆರೋಪದಡಿ ಖಾಸಗಿ ಸುದ್ದಿವಾಹಿನಿಯೊಂದರ ನಿರೂಪಕ ಅಜಿತ್ ಹನಮಕ್ಕನವರ್ ಮತ್ತು ಕಾರ್ಯಕ್ರಮ ವ್ಯವಸ್ಥಾಪಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಲ್ಲಮಜಲು ಬದ್ರಿಯಾ ಜುಮಾ ಮಸೀದಿ ಆಡಳಿತ ಹಾಗೂ ಜಮಾಅತ್ ವತಿಯಿಂದ ಶುಕ್ರವಾರ ಬಂಟ್ವಾಳ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜವಾಬ್ದಾರಿ ಹುದ್ದೆಯಲ್ಲಿರುವ ಟಿವಿ ನಿರೂಪಕ ಅಜಿತ್ ಎಂಬವರು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ, ನಿಂದನಾತ್ಮಕ ಹೇಳಿಕೆ ನೀಡಿರುವುದು ಖಂಡನೀಯ. ಇದರಿಂದ ಕೋಮು ಸೌಹಾರ್ದತೆಗೆ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ. ಆದ್ದರಿಂದ ಖಾಸಗಿ ಸುದ್ದಿ ವಾಹಿನಿಯ ಚಾನೆಲ್ ಅನ್ನು ಜಪ್ತಿ ಮಾಡಿ ನಿರೂಪಕ ಹಾಗೂ ವ್ಯವಸ್ಥಾಪಕ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮೂಲಕ ಒತ್ತಾಯಿಸಲಾಯಿತು. ಬಳಿಕ ಬಂಟ್ವಾಳ ನಗರ ಠಾಣಾ ಎಸ್ಸೈ ಚಂದ್ರಶೇಖರ್ ಅವರಿಗೆ ದೂರು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಮಾಅತ್‍ನ ಅಧ್ಯಕ್ಷ ಹಾಜಿ ಕೆ.ಎಸ್. ಅಬೂಬಕರ್, ಗೌರವಾಧ್ಯಕ್ಷ ಹಾಜಿ ಸಿ.ಕೆ.ಸೂಫಿ ಮುಸ್ಲಿಯಾರ್, ಉಪಾಧ್ಯಕ್ಷ ಇಸಾಕ್, ಅಹ್ಮದ್ ಶರೀಫ್, ಇಸ್ಮಾಯಿಲ್, ಪಿ.ಸಿ.ಮುಹಮ್ಮದ್, ಅಬ್ದುಲ್ ರಹಿಮಾನ್, ಇಸ್ಮಾಯಿಲ್ ಕೊಳಂಬೆ, ಫಾರೂಕ್, ರಫೀಕ್, ಶೇಕಬ್ಬ, ರಫೀಕ್, ಅಬ್ದುಲ್ ಜಬ್ಬಾರ್, ಆದಂ, ಹಿದಾಯತ್, ಮುಹಮ್ಮದ್ ಉನೈಸ್, ವಿವಿಧ ಸಂಘಟನೆಯ ಮುಖಂಡರಾದ ಅಬ್ದುಲ್ ಸತ್ತಾರ್, ಅಬ್ದುಲ್ಲಾ, ಶಬೀರ್, ಶಮೀಮ್, ಕರೀಂ ಹಾಗೂ ಜಮಾಅತ್ ಸದಸ್ಯರು ಹಾಜರಿದ್ದರು.