ಮೆಲ್ಕಾರ್ ಮಹಿಳಾ ಪದವಿ ಪೂರ್ವ-ಪದವಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
ಬಂಟ್ವಾಳ, ಜ. 4: ಮಂಗಳೂರು ಎಜುಕೇಶನ್ ಎನ್‍ಹ್ಯಾನ್ಸ್ ಮೆಂಟ್ ಟ್ರಸ್ಟ್‍ನಡಿ ಸಜೀಪ ಮುನ್ನೂರಿನ ಮಾರ್ನಬೈಲ್‍ನಲ್ಲಿ ಕಾರ್ಯಾಚರಿಸುತ್ತಿರುವ "ಮೆಲ್ಕಾರ್ ಮಹಿಳಾ ಪದವಿ ಪೂರ್ವ ಹಾಗೂ ಪದವಿ ಕಾಲೇಜಿ"ನ ದಶಮಾನೋತ್ಸವದ ಅಂಗವಾಗಿ ಸಾಂಸ್ಕೃತಿಕ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಶುಕ್ರವಾರ ಕಾಲೇಜಿನ ವಠಾರದಲ್ಲಿ ನಡೆಯಿತು.
ಎ.ಜೆ. ರೂರಲ್ ಹೆಲ್ತ್ ಟ್ರೈನಿಂಗ್ ಸೆಂಟರ್ ಮೆಲ್ಕಾರ್ ಇದರ ಸಿಎಚ್‍ಒ ಡಾ.ಜಯಮಾಲ ವಿಶ್ವನಾಥ್ ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ದರು. ಬಿ.ಮೂಡಾ ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ವಕೀಲರಾದ ಸೈರಾ ಕೆ.ಝುಬೈರ್, ಶೋಭಲತಾ, ಉಪಪ್ರಾಂಶುಪಾಲೆ ಸುನಿತಾ, ಬಿಎ ವಿಭಾಗದ ಮುಖ್ಯಸ್ಥೆ ಕಲಾವತಿ, ಬಿಕಾಂ ವಿಭಾಗದ ಮುಖ್ಯಸ್ಥೆ ಮಮತಾ ರಾವ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಆಯಿಶಾ ತಶ್ನೀಯಾ ಸ್ವಾಗತಿಸಿ, ಖತೀಜಾ ರಝಿನಾ ವಂದಿಸಿ, ಶಾಹಿನಾ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.