ಈಜಲು ಹೋಗಿ ಮರಣ ಹೊಂದಿದ ವಿದ್ಯಾರ್ಥಿಗಳ ಮನೆಗೆ ಮುಸ್ಲಿಂ ಸೆಂಟ್ರಲ್ ಕಮಿಟಿ ಭೇಟಿ
Update: 2019-01-04 23:34 IST
ಮಂಗಳೂರು, ಜ.4: ಉಪ್ಪಿನಂಗಡಿಯಲ್ಲಿ ಈಜಲು ಹೋಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ನೆಲ್ಯಾಡಿ ಮುಹಮ್ಮದ್ ಸುಹೇದ್, ಪೆರ್ನೆಯ ಸಹೀದ್, ಉಪ್ಪಿನಂಗಡಿಯ ಫಿರ್ಝಾನ್‌ನ ಮನೆಗಳಿಗೆ ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್ ನೇತೃತ್ವದ ನಿಯೋಗ ಭೇಟಿ ನೀಡಿ ಸಾಂತ್ವನ ಹೇಳಿ ಪರಿಹಾರ ವಿತರಿಸಿತು.
ಈ ಸಂದರ್ಭದಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಸದಸ್ಯರಾದ ಅದ್ದು ಹಾಜಿ, ಅಸ್ಗರ್ ಅಲಿ ಉಪ್ಪಿನಂಗಡಿ, ದಾರುನ್ನೂರಿನ ಉಪಾಧ್ಯಕ್ಷ ಅಬ್ದುಲ್ ರಝಾಕ್ ಬಿ.ಸಿ.ರೋಡ್, ಪಕೀರಬ್ಬ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು.