ಯುವಕರು ಸಂಘಟಿತರಾಗಿ ಸಮುದಾಯದ ಒಳಿತಿಗೆ ಶ್ರಮಿಸಿ : ಸುಲೈಮಾನ್ ಹಾಜಿ

Update: 2019-01-05 05:42 GMT

ಕಾರ್ಕಳ, ಜ. 5: ‘ಧಾರ್ಮಿಕ ತತ್ವಾದರ್ಶಗಳನ್ನು ಯುವಜನತೆ ತಮ್ಮ ನೈಜ ಜೀವನದಲ್ಲಿ ಪಾಲಿಸಿಕೊಂಡು ಬಂದಲ್ಲಿ ಸಮಾಜದಲ್ಲಿ ಬದಲಾವಣೆ ಸಾಧ್ಯ. ಧರ್ಮಸಾರಗಳ ಮೌಲ್ಯಗಳು ಆಧುನಿಕ ಸಮಾಜದಲ್ಲಿ ಪ್ರಭಾವಶಾಲಿಯಾಗಿದ್ದು ಅದರ ತಿಳುವಳಿಕೆಯ ಅಗತ್ಯವಿದೆ. ಜ್ಞಾನಗಳಿಕೆಯಿಂದ ಸಂಘಟಿತರಾಗಿ ಸಮುದಾಯದ ಒಳಿತಿಗಾಗಿ ಶ್ರಮಿಸಿ’ ಎಂದು ಬಜಗೋಳಿ ನೂರುಲ್ ಹುದಾ ಮಸೀದಿಯ ಅಧ್ಯಕ್ಷ ಸುಲೈಮಾನ್ ಹಾಜಿ ಅಭಿಪ್ರಾಯಪಟ್ಟರು. 

ಅವರು ಬಜಗೋಳಿ ನೂರುಲ್ ಹುದಾ ಮಸೀದಿಯಲ್ಲಿ ಇತ್ತೀಚಿಗೆ ನಡೆದ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಕಾರ್ಕಳ ದಕ್ಷಿಣ ವಲಯ ನೂತನ ಸಮಿತಿ ರಚನಾ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಬಜಗೋಳಿ ಜಮಾಅತ್ ಉಪಾಧ್ಯಕ್ಷ ಎನ್.ಕೆ. ಮುಹಮ್ಮದ್ ಪುತ್ತಾಕ ಮಾತನಾಡಿ ‘ಹಿರಿಯರಿಗೆ ಗೌರವ ಸಲ್ಲಿಸುವುದು ಇಸ್ಲಾಂ ಕಲಿಸಿರುವ ಶ್ರೇಷ್ಠ ಆಚರಣೆಗಳಲ್ಲೊಂದಾಗಿದೆ. ಹಿಂದಿನ ಕಾಲದಲ್ಲಿ ಯುವಕರು ಹಿರಿಯರನ್ನು ಕಂಡಾಗ ಎದ್ದು ನಿಲ್ಲುವ ರೂಢಿಯಿತ್ತು. ಆಧುನಿಕ ಸಮಾಜದ ಬದಲಾವಣೆಯಿಂದ ಯುವಜನತೆಯು ಸಂಸ್ಕೃತಿ ಮರೆಯುತ್ತಿರುವುದು ಖೇದಕರ’ ಎಂದರು. 

ಹೊಸ್ಮಾರು ಶೈಖ್ ಮುಹಿಯದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಸುಲೈಮಾನ್ ಸಅದಿ ಅಲ್‍ಅಫ್ಳಲಿ, ಬಜಗೋಳಿ ನೂರುಲ್ ಹುದಾ ಮಸೀದಿ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ಮುಸ್ಲಿಯಾರ್ ಸಂಸೆ, ಬಜಗೋಳಿ ದಿಡಿಂಬಿರಿ ಮದರಸ ಧರ್ಮಗುರು ಅಬ್ದುರ್ರಹ್ಮಾನ್ ಮುಸ್ಲಿಯಾರ್ ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಸಿ. ಅಬ್ದುರ್ರಹ್ಮಾನ್, ದಕ್ಷಿಣ ವಲಯ ಕಾರ್ಯದರ್ಶಿ ಸಯ್ಯಿದ್ ಆಸಿಫ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News