×
Ad

ಜ.10ರಿಂದ ರಾಜ್ಯಾದ್ಯಂತ ‘ಟ್ರಂಡ್’ನಿಂದ ಶೈಕ್ಷಣಿಕ ಅಭಿಯಾನ

Update: 2019-01-05 20:18 IST

ಮಂಗಳೂರು, ಜ.5: ದ.ಕ.ಜಿಲ್ಲಾ ‘ಟ್ರಂಡ್’ ಸಮಿತಿಯಿಂದ ಜ.10 ರಿಂದ ಮಾರ್ಚ್ 25ರ ತನಕ ಎಸೆಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ತರಭೇತಿ ನಡೆಸಲಿದೆೆ. ಇದರ ಉದ್ಘಾಟನೆಯು ಬಿ.ಸಿ.ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ಇತ್ತೀಚೆಗೆ ಜರುಗಿತು.

ಎಸ್ಕೆಎಸೆಸ್ಸೆಫ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಸದಕತುಲ್ಲ ಫೈಝಿ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿದರು.  ಎಸ್ಕೆಎಸೆಸ್ಸೆಫ್ ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಎಸ್ಕೆಎಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ವಿಷಯ ಮಂಡಿಸಿದರು. ಸೈಯದ್ ಅಮೀರ್ ತಂಙಳ್ ದುಆಗೈದರು.

ಸಭೆಯಲ್ಲಿ ಟ್ರೆಂಡ್ ಜನರಲ್ ಕನ್ವೀನರ್ ಇಕ್ಬಾಲ್ ಬಾಳಿಲ, ಎಸ್ಕೆಎಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷರಾದ ತಾಜುದ್ದೀನ್ ರಹ್ಮಾನಿ, ಹನೀಫ್ ಧೂಮಲಿಕೆ, ಕಾರ್ಯದರ್ಶಿ ಅಬ್ದುಲ್ ರಶೀದ್ ರಹ್ಮಾನಿ, ಮುಹಮ್ಮದ್ ಕುಂಞ ಮಾಸ್ಟರ್, ಆರೀಫ್ ಬಡಕಬೈಲ್, ಫಾರೂಕ್ ಮೂಡುಬಿದಿರೆ, ಸಿದ್ದೀಖ್ ಆಡ್ಕ, ಇಬ್ರಾಹೀಂ ಮುಸ್ಲಿಯಾರ್ ವಿಟ್ಲ, ಶಾಫಿ ದಾರಿಮಿ ಸುಳ್ಯ, ಇಸ್ಹಾಕ್ ಫೈಝಿ, ಅಶ್ರಫ್ ಕಡಬ, ರಿಯಾಝ್ ರಹ್ಮಾನಿ ಮಂಗಳೂರು, ಇರ್ಷಾದ್ ದಾರಿಮಿ ಬಂಟ್ವಾಳ, ನಝೀರ್ ಅಝ್ಝರಿ ಬೆಳ್ತಂಗಡಿ, ಝಕರಿಯ್ಯ ಮರ್ಧಾಳ, ಇಬ್ರಾಹೀಂ ಕೊಣಾಜೆ, ಶರೀಫ್ ಸಾಲ್ಮರ, ನೌಶಾದ್ ಮಲಾರ್, ಮುಹಮ್ಮದ್ ಮುಸ್ಲಿಯಾರ್ ಪುತ್ತೂರು, ಶರೀಫ್ ಮೂಸ ಕುದ್ದುಪದವು ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಯೀಲ್ ಯಮಾನಿ ತಿಂಗಳಾಡಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News