ಪರಿಸ್ಥಿತಿ ಕೈಮೀರಿ ಹೋಯಿತು: 13 ಸಾವಿರ ಕೋ. ರೂ. ವಂಚನೆ ಬಗ್ಗೆ ನೀರವ್ ಮೋದಿ ಹೇಳಿದ್ದೇನು ?

Update: 2019-01-05 16:53 GMT

ಹೊಸದಿಲ್ಲಿ, ಜ. 5: ಪಂಜಾಬ್ ನ್ಯಾಶನಲ್ ಬ್ಯಾಂಕ್‌ನೊಂದಿಗಿನ ವ್ಯವಹಾರ ‘‘ನಾಗರಿಕ ವ್ಯವಹಾರ’’ ಎಂದು ದೇಶದಿಂದ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿ ಶನಿವಾರ ಹೇಳಿದ್ದಾರೆ.

ನಾನು ಯಾವುದೇ ತಪ್ಪು ಮಾಡಿಲ್ಲ. ಪರಿಸ್ಥಿತಿ ಕೈಮೀರಿ ಹೋಯಿತು. ಸುರಕ್ಷೆಯ ಕಾರಣಕ್ಕೆ ದೇಶಕ್ಕೆ ಹಿಂದೆ ಬರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿ ಕಾಯ್ದೆ -2018ರ ಅಡಿ ‘ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿ’ ಎಂದು ಘೋಷಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ದೂರಿನ ವಿಚಾರಣೆ ನಡೆಸಿದ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯದ ಮುಂದೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

  13,000 ಕೋ. ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ನೀರವ್ ಮೋದಿ ಹಾಗೂ ಅವರ ಮಾವ ಮೆಹುಲ್ ಚೋಕ್ಸಿ ಭಾರತಕ್ಕೆ ಬೇಕಾದವರಾಗಿದ್ದಾರೆ. ಮೋದಿ ಲಂಡನ್‌ನಲ್ಲಿ ಹಾಗೂ ಚೋಕ್ಸಿ ಆಂಟಿಗುವಾದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಅನೇಕ ಸಮನ್ಸ್‌ಗಳನ್ನು ಜಾರಿ ಮಾಡಿದರೂ ಅವರು ಭಾರತಕ್ಕೆ ಹಿಂದಿರುಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News