ಭೂತಾನ್ : ಗಣರಾಜ್ಯೋತ್ಸವ ಶಿಬಿರದಲ್ಲಿ ಆಳ್ವಾಸ್‍ನ ಉದಯ ಕುಮಾರ್
Update: 2019-01-05 22:41 IST
ಮೂಡುಬಿದಿರೆ, ಜ. 5: ಭಾರತ, ಸೌಹಾರ್ದ ರಾಷ್ಟ್ರಗಳ ಪರಂಪರೆ ಹಾಗೂ ಸಾಂಸ್ಕೃತಿಕ ವಿನಿಮಯಕ್ಕಾಗಿ ಭೂತಾನ್ 111ನೇ ರಾಷ್ಟ್ರೀಯ ದಿನದ ಅಂಗವಾಗಿ ಪ್ರತಿವರ್ಷ ಭೂತಾನ್‍ನಲ್ಲಿ ಹಮ್ಮಿಕೊಳ್ಳಲಾಗುವ ವೈಇಪಿ( ಯೂತ್ ಎಕ್ಸಚೆಂಜ್ ಪ್ರೋಗಾಮ್) ಶಿಬಿರದಲ್ಲಿ ಮೂಡುಬಿದಿರೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎನ್‍ಸಿಸಿ ವಾಯುದಳ ವಿಭಾಗದ ಕೆಡೆಟ್ ಉದಯ ಕುಮಾರ್ ಭಾಗವಹಿಸಿದ್ದಾರೆ.
ಭೂತಾನ್ ತಿಂಪುವಿನಲ್ಲಿ ನಡೆದ ವಿಶೇಷ ಶಿಬಿರಕ್ಕೆ ಅಲ್ಲಿನ ರಾಜ್ಯಪಾಲರು ಉದಯ ಕುಮಾರ್ ಸಹಿತ 12 ಎನ್‍ಸಿಸಿ ಕೆಡೆಟ್ ಹಾಗೂ ಇಬ್ಬರು ಎನ್‍ಸಿಸಿ ಅಧಿಕಾರಿಗಳನ್ನು ಅಹ್ವಾನಿಸಿದರು.
ಭೂತಾನ್ ಯುವನಜನ ಸೇವೆ, ಕ್ರೀಡಾ ಸಚಿವತಶಿ ವಾಂಗ್‍ಚೂಕ್ ಅವರಿಂದ ಉದಯ ಕುಮಾರ್ ಪ್ರಮಾಣಪತ್ರ ಸ್ವೀಕರಿಸಿದರು. ಭೂತಾನ್‍ನ ರಾಯಲ್ ಆರ್ಮಿ ಲೆಫ್ಟಿನೆಂಟ್ ಜನರಲ್ ಬಟೋ ಶೇರಿಂಗ್, ಭಾರತೀಯ ರಾಯಭಾರಿ ಜಯದೀಪ್ ಸರ್ಕಾರ್, ಶಿಕ್ಷಣ ಸಚಿವ ಜೈ ಬೀರ್ ರಾಯ್ ಜೊತೆ ಸಮಾ ಲೋಚನೆ ನಡೆಸಿದರು.