×
Ad

ಮಂಗಳೂರು: ವಿಕೆ ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್‌ನಿಂದ ಅದೃಷ್ಟಶಾಲಿಗಳ ಆಯ್ಕೆ

Update: 2019-01-05 23:29 IST

ಮಂಗಳೂರು, ಜ.5: ಯೆಯ್ಯಡಿ ಏರ್‌ಪೋರ್ಟ್ ರಸ್ತೆಯಲ್ಲಿನ ವಿ.ಕೆ. ಫರ್ನಿಚರ್, ಇಲೆಕ್ಟ್ರಾನಿಕ್ಸ್ ಹಾಗೂ ಉರ್ವಾ ಚಿಲಿಂಬಿಯಲ್ಲಿರುವ ವಿ.ಕೆ. ಲಿವಿಂಗ್ ಕಾನ್ಸೆಪ್ಟ್ ಶೋರೂಂಗಳಲ್ಲಿ ಆಯೋಜಿಸಲಾಗಿದ್ದ ವಿಶೇಷ ಮಾರಾಟದ ಅದೃಷ್ಟಶಾಲಿಗಳ ಆಯ್ಕೆ ಕಾರ್ಯಕ್ರಮ ಯೆಯ್ಯಡಿ ಮಳಿಗೆಯಲ್ಲಿ ಶನಿವಾರ ನಡೆಯಿತು.

ಲಕ್ಕಿ ಡ್ರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆನರಾ ಬ್ಯಾಂಕ್‌ನ ಗಾಂಧಿನಗರ ಬ್ರಾಂಚ್ ಮ್ಯಾನೇಜರ್ ನಾಗರಾಜ ಶೆಣೈ, ವಿಕೆ ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಕಳೆದ ಹಲವು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೋಫಾ, ಫರ್ನಿಚರ್, ವಿವಿಧ ವಿನ್ಯಾಸದ ಪೀಠೋಪಕರಣಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ. ಸಂಸ್ಥೆಯ ಮಾಲಕ ವಿಠಲ ಕುಲಾಲ್ ಶ್ರಮಜೀವಿಯಾಗಿದ್ದು, ವಿಕೆ ಬ್ರಾಂಡ್ ಹೆಸರುವಾಸಿಯಾಗಲು ಕಾರಣೀಕರ್ತರಾಗಿ ದ್ದಾರೆ. ಗ್ರಾಹಕರು-ಸಂಸ್ಥೆಯ ನಡುವೆ ಉತ್ತಮ ಸಂವಹನವಿದ್ದು, ಮುಂದಿನ ದಿನಗಳಲ್ಲಿ ಸಂಸ್ಥೆಯು ತನ್ನ ಮಳಿಗೆಗಳನ್ನು ರಾಜ್ಯಕ್ಕೂ ವಿಸ್ತರಿಸಲಿ ಎಂದು ಶುಭ ಹಾರೈಸಿದರು.

ಕೆನರಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಎ.ಎಸ್.ಭಟ್ ಮಾತನಾಡಿ, ವಿಕೆ ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಸಂಸ್ಥೆಗೆ ಕೆನರಾ ಬ್ಯಾಂಕ್ ಆರ್ಥಿಕವಾಗಿ ಸಹಾಯ ನೀಡುತ್ತಾ ಬಂದಿದೆ. ಇದರಿಂದ ಸಂಸ್ಥೆಯು ಗುಣಮಟ್ಟದ ಸೋಫಾ, ಫರ್ನಿಚರ್‌ಗಳನ್ನು ಗ್ರಾಹಕರಿಗೆ ಆರೋಗ್ಯಕರ ಬೆಲೆಯಲ್ಲಿ ನೀಡುತ್ತಿದೆ. ಇದರಿಂದ ಗ್ರಾಹಕರೂ ಸಂತೃಪ್ತರಾಗಿದ್ದಾರೆ. ಸಂಸ್ಥೆಯು ಇನ್ನು ಎರಡು ಶೋರೂಂಗಳನ್ನು ಶೀಘ್ರದಲ್ಲಿಯೇ ಬಿ.ಸಿ.ರೋಡ್ ಹಾಗೂ ಪುತ್ತೂರಿನಲ್ಲಿ ತೆರೆಯ ಲಿದೆ. ಸಂಸ್ಥೆ ಯಶಸ್ಸಿನತ್ತ ಸಾಗಲಿ ಎಂದು ಶುಭ ಹಾರೈಸಿದರು.

ಲಕ್ಕಿ ಡ್ರಾದಲ್ಲಿ ಬಂಪರ್ ಬಹುಮಾನ ‘ರೆನಾಲ್ಟ್ ಕ್ವಿಡ್’ ಕಾರು ನವೀನ್ ನಾಯ್ಕಿ ಎಂಬವರು ಗೆದ್ದುಕೊಂಡರು. ಉಳಿದಂತೆ ಬಂಗಾರದ ನೆಕ್ಲೆಸ್, ಬೆಡ್‌ರೂಂ ಸೆಟ್, ಡೈನಿಂಗ್ ಸೆಟ್, ಸೋಫಾ ಸೆಟ್, ವಾರ್ಡ್‌ರೋಬ್, ಎಲ್‌ಸಿಡಿ ಟಿವಿ, ರೆಫ್ರಿಜರೇಟರ್, ವಾಟರ್ ಪ್ಯೂರಿಫಯರ್‌ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಯಿತು.

ಸಂಸ್ಥೆಯ ಮಾಲಕ ವಿಟ್ಠಲ್ ಕುಲಾಲ್ ಮತ್ತು ವಿನುತಾ ಕುಲಾಲ್ ಅತಿಥಿಗಳನ್ನು ಗೌರವಿಸಿದರು.

ಕಾರ್ಯಕ್ರಮದಲ್ಲಿ ಕರಾವಳಿ ಮಾರ್ಕೆಟಿಂಗ್ ವಿತರಕ ಶಿವಾನಂದ, ವಿಕೆ ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್‌ನ ಮಾಲಕ ವಿಠ್ಠಲ್ ಕುಲಾಲ್, ವಿಕೆ ಮಳಿಗೆ ಕಟ್ಟಡದ ಮಾಲಕ ಮೋಹನ್ ಬಾಳಿಗಾ, ದಾಯ್ಜಿವರ್ಲ್ಡ್‌ನ ಎಂಡಿ ಅಲೆಕ್ಸ್ ಕ್ಯಾಸ್ಟೆಲಿನೊ, ಉದ್ಯಮಿ ರತ್ನಾಕರ ಜೈನ್, ವಿನುತಾ ಕುಲಾಲ್, ಮ್ಯಾನೇಜರ್ ಅಣ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿಕೆ ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್‌ನ ಮಾಲಕ ವಿಠ್ಠಲ್ ಕುಲಾಲ್ ಸ್ವಾಗತಿಸಿದರು. ರಾಹುಲ್ ಜಾಹೀರಾತು ಸಂಸ್ಥೆಯ ಮಾಲಕ ಟೈಟಸ್ ನರೋನ್ಹ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News