ವಿಜಯಾ ಬ್ಯಾಂಕ್‌ನ ವಿಲೀನ ವಿರೋಧಿಸಿ ಜ.9ರಂದು ಮಂಗಳೂರು ಬಂದ್‌ಗೆ ಯುವ ಕಾಂಗ್ರೆಸ್ ಕರೆ
ಮಂಗಳೂರು, ಜ.6: ಕರಾವಳಿ ಮೂಲದ ವಿಜಯಾ ಬ್ಯಾಂಕ್ ನ್ನು ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡಾ ದೇನಾ ಬ್ಯಾಂಕ್‌ನೊಂದಿಗೆ ವಿಲೀನ ಮಾಡುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ ಜ.9ರಂದು ಮಂಗಳೂರು ಬಂದ್‌ಗೆ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಕರೆ ನೀಡಿದೆ.
ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಮಿಥುನ್ ರೈ ಜ.9ರಂದು ಬೆಳಗ್ಗೆ 6ರಿಂದ ಸಂಜೆ 4 ರವರೆಗೆ ಬಂದ್ ನಡೆಸಲಾಗುವುದು ಎಂದರು.
ಲಾಭದಲ್ಲಿರುವ ವಿಜಯಾ ಬ್ಯಾಂಕ್ ಅನ್ನು ನಷ್ಟದಲ್ಲಿರುವ ಎರಡು ಬ್ಯಾಂಕ್‌ಗಳೊಂದಿಗೆ ವಿಲೀನ ಮಾಡುವ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲು ಮೌನ ವಹಿಸಿರುವುದು ಯಾಕೆ? ಪ್ರಧಾನಿ ನರೇಂದ್ರ ಮೋದಿಗೆ ಸಂಸದರು ದ.ಕ. ಜಿಲ್ಲೆಯನ್ನು ಒತ್ತೆ ಇಟ್ಟಿದ್ದಾರೆಯೇ ಎಂದು ಮಿಥುನ್ ರೈ ಆಕ್ರೋಶ ವ್ಯಕ್ತಪಡಿಸಿದರು.
ಜ.9ರ ಬಂದ್ ಯಶಸ್ವಿಗೊಳಿಸಲು ಬಸ್ ಮಾಲಕರು, ಹೊಟೇಲ್ ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜೊತೆ ಮಾತನಾಡಲಾಗುವುದು. ಸಂಸದ ನಳಿನ್ ಕೂಡಾ ಬಂದ್‌ಗೆ ಕೈ ಜೋಡಿಸಲಿ ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಎ.ಸಿ.ವಿನಯಾರಾಜ್, ಸುಹೈಲ್ ಕಂದಕ್, ಸಂತೋಷ್‌ಶೆಟ್ಟಿ, ಜಯಕುಮಾರ್ ಶೆಟ್ಟಿ, ನೀರಜ್ ಪಾಲ್, ಸಿ.ಎಂ.ಮುಸ್ತಫಾ ಮತ್ತಿತರರು ಉಪಸ್ಥಿತರಿದ್ದರು.