ಎಸ್ಸೆಸ್ಸೆಫ್ ಸುರತ್ಕಲ್ ಡಿವಿಶನ್ ವಾರ್ಷಿಕ ಮಹಾಸಭೆ
ಮಂಗಳೂರು, ಜ.6: ಎಸ್ಸೆಸ್ಸೆಫ್ ಸುರತ್ಕಲ್ ಡಿವಿಶನ್ ಇದರ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯು ಜ.2ರಂದು ಕಾಟಿಪಳ್ಳದ ಮಿಸ್ಬಾಹ್ ಮಹಿಳಾ ಕಾಲೇಜಿನಲ್ಲಿ ನಡೆಯಿತು.
ಸಭೆಯನ್ನು ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಉಪಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ ಉದ್ಘಾಟಿಸಿದರು. ಸುರತ್ಕಲ್ ಡಿವಿಷನ್ ಅಧ್ಯಕ್ಷ ಆರೀಫ್ ಝುಹ್ರಿ ಮುಕ್ಕ ಅಧ್ಯಕ್ಷತೆ ವಹಿಸಿದ್ದರು.
2018-19ನೇ ಸಾಲಿನ ವರದಿಯನ್ನು ಡಿವಿಷನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಮಂಗಳಪೇಟೆ ಹಾಗೂ ಲೆಕ್ಕಪತ್ರವನ್ನು ಡಿವಿಷನ್ ಕೋಶಾಧಿಕಾರಿ ಮುಹಮ್ಮದ್ ಮೂಸಾ ಮಂಡಿಸಿದರು.
ಇದೇ ಸಂದರ್ಭ ಜಿಲ್ಲಾ ಸಮಿತಿಯಿಂದ ವೀಕ್ಷಕರಾಗಿ ಆಗಮಿಸಿದ್ದ ಖುಬೈಬ್ ತಂಙಳ್ ಹಾಗೂ ಮುನೀರ್ ಸಖಾಫಿ ಉಳ್ಳಾಲ ನೇತೃತ್ವದಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಮುನೀರ್ ಸಖಾಫಿ ಸಂಘಟನೆಯ ಮಹತ್ವ ಹಾಗೂ ಕಾರ್ಯಕರ್ತರ ಸಂಘಟನಾ ಚಟುವಟಿಕೆ ಯಾವ ರೀತಿಯಲ್ಲಾಗಿರಬೇಕೆಂಬುದರ ಬಗ್ಗೆ ಚುಟುಕಾದ ರೀತಿಯಲ್ಲಿ ವಿಷಯ ಮಂಡಿಸಿದರು.
ಅಬ್ದುಲ್ಲತೀಫ್ ಸಖಾಫಿ ಮುಲ್ಕಿ, ಹೈದರ್ ಮದನಿ ಕೋಟೆ, ಅಬ್ದುರ್ರಹ್ಮಾನ್ ಹಾಜಿ, ಕೆಸಿಎಫ್ ರಿಯಾದ್ ಝೋನಲ್ ಶಿಕ್ಷಣ ವಿಭಾಗ ಕನ್ವೀನರ್ ಹಸೈನಾರ್ ಕಾಟಿಪಳ್ಳ, ಬಶೀರ್ ಕಾನಾ, ಫಾರೂಕ್ ಮಂಗಳಪೇಟೆ, ರಫೀಕ್ ಕಾಟಿಪಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಿವಿಷನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಮಂಗಳಪೇಟೆ ಸ್ವಾಗತಿಸಿದರು. ಕೊನೆಯಲ್ಲಿ ಡಿವಿಷನ್ ನೂತನ ಪ್ರಧಾನ ಕಾರ್ಯದರ್ಶಿ ಹೈದರ್ ಕಾಟಿಪಳ್ಳ ವಂದಿಸಿದರು.
2019 -20ನೇ ಸಾಲಿನ ಪದಾಧಿಕಾರಿಗಳು
ಅಧ್ಯಕ್ಷರು: ಫಾರೂಖ್ ಸಖಾಫಿ ಕಾಟಿಪಳ್ಳ
ಉಪಾಧ್ಯಕ್ಷರು: ಫಾರೂಖ್ ಅಹ್ಸನಿ 4ನೇ ಬ್ಲಾಕ್ ಕಾಟಿಪಳ್ಳ
ಹರ್ಷದ್ ಸಖಾಫಿ ಕೃಷ್ಣಾಪುರ
ರಫೀಖ್ 3ನೇ ಬ್ಲಾಕ್ ಕಾಟಿಪಳ್ಳ
ಪ್ರಧಾನ ಕಾರ್ಯದರ್ಶಿ: ಹೈದರ್ 4ನೇ ಬ್ಲಾಕ್ ಕಾಟಿಪಳ್ಳ
ಜೊತೆ ಕಾರ್ಯದರ್ಶಿ:
ತನ್ಸೀರ್ 4ನೇ ಬ್ಲಾಕ್ ಕಾಟಿಪಳ್ಳ,
ಅಶ್ವದ್ ಸಾಗ್
ಹನೀಫ್ ಸುರತ್ಕಲ್
ಕೋಶಾಧಿಕಾರಿ - ರಿಝ್ವಾನ್ ಕೃಷ್ಣಾಪುರ
ಕ್ಯಾಂಫಸ್ ಕಾರ್ಯದರ್ಶಿ- ನೌಫಲ್ ಗುತ್ತಾಕಾಡ್
ಹಾಗೂ 13 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.