ಬಾಂಬಿಲ: 3 ಜೋಡಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ

Update: 2019-01-06 11:53 GMT

ಬಂಟ್ವಾಳ, ಜ.6: ಕಾವಳಪಡೂರು ಗ್ರಾಮದ ಬಾಂಬಿಲ ಮುಬಾರಕ್ ಜುಮಾ ಮಸೀದಿಯ ವತಿಯಿಂದ ದಾರುಸ್ಸಲಾಂ ಮದ್ರಸ ಮದ್ವ ಹಾಗೂ ಅನ್ಸಾರುಲ್ ಮುಸ್ಲಿಮೀನ್ ಇದರ ಜಂಟಿ ಆಶ್ರಯದಲ್ಲಿ ಮೂವರು ಬಡ ಯುವತಿಯರ ಸಾಮೂಹಿಕ ಸರಳ ವಿವಾಹವು ರವಿವಾರ ಬಾಂಬಿಲ ಮಸೀದಿಯ ವಠಾರದಲ್ಲಿ ಜರುಗಿತು.

ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಖಾಹ್ ನೆರವೇರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇರಳದ ಎನ್.ಪಿ.ಎಂ.ಸೈಯದ್ ಜಲಾಲುದ್ದೀನ್ ತಂಙಳ್ ಏಝುಮಲ, ಸರಳ ವಿವಾಹ ಇಸ್ಲಾಮಿನ ಒಂದು ಭಾಗವಾಗಿದ್ದು, ಪ್ರತಿಯೊಂದು ಜಮಾಅತ್ ಇಂತಹ ವಿವಾಹಕ್ಕೆ ಹೆಚ್ಚು ಆದ್ಯತೆ ನೀಡಬೇಕಿದೆ. ಆ ಮೂಲಕ ಆಡಂಬರದ ವಿವಾಹ ಸಮಾರಂಭಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದರು.

ಚೊಕ್ಕಬೆಟ್ಟುವಿನ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಮುಖ್ಯಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಮುದರ್ರಿಸ್, ಎಂ.ಉಸ್ಮಾನ್ ಮುಸ್ಲಿಯಾರ್, ಅಬ್ಬಾಸ್ ಮುಸ್ಲಿಯಾರ್, ಬಿ.ಎಂ.ಝೈನುದ್ದೀನ್ ಮಕ್ದೂಮ್ ಅನ್ಸಾರಿ, ಬಿ. ಮುಸ್ತಫ, ಶರೀಫ್ ಮೇಲಂಗಡಿ, ಅಬ್ದುಸ್ಸಲಾಂ, ಅಬ್ದುರ್ರಹ್ಮಾನ್ ಝೆನಿತ್, ಜಿ. ಮುಹಮ್ಮದ್ ನೇತ್ರಾವತಿ ಮತ್ತಿತರರು ಉಪಸ್ಥಿತರಿದ್ದರು.

ಬಾಂಬಿಲ ಜೆಎಂಜೆ ಅಧ್ಯಕ್ಷ ಬಿ.ಎಂ.ಬಾವ ಮುಸ್ಲಿಯಾರ್ ಸ್ವಾಗತಿಸಿದರು. ಬಾಂಬಿಲ ಕೇಂದ್ರ ಜುಮಾ ಮಸೀದಿಯ ಖತೀಬ್ ಎನ್.ಅಬ್ದುಲ್ ಬಶೀರ್ ಯಮಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಸದಸ್ಯ ಯೂಸುಫ್ ಬಾಂಬಿಲ ವಂದಿಸಿದರು. ಆದಂ ಫೈಝಿ ಕಾರ್ಯಕ್ರಮ ನಿರೂಪಿಸಿದರು.

ಮೂರು ವಧುಗಳಿಗೆ ತಲಾ 5 ಪವನ್ ಚಿನ್ನಾಭರಣ, 30 ಸಾವಿರ ರೂ. ಮೌಲ್ಯದ ಉಡುಪು ಹಾಗೂ ವರನಿಗೆ ವಾಚ್, ಉಡುಪುಗಳನ್ನು ಮಸೀದಿ ಆಡಳಿತ ಸಮಿತಿಯ ವತಿಯಿಂದ ಉಡುಗೊರೆಯಾಗಿ ನೀಡಲಾಯಿತು.

ಡಿ.5ರಂದು ಮಗರಿಬ್ ನಮಾಝಿನ ಬಳಿಕ ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕಾಡಮಿ ಶಮೀಮೇ ಮದೀನಾ ತಂಡದಿಂದ ಬುರ್ದಾ ಆಲಾಪನೆ, ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ನಡೆಯಿತು. ಕಣ್ಣೂರು ಮಸೀರಿಯ ಮುದರ್ರಿಸ್ ಅನ್ಸಾರುದ್ದೀನ್ ಬುರ್ಹಾನಿ ಫೈಝಿ ಮುಖ್ಯ ಭಾಷಣ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News