ಬಹರೈನ್: ಅಲ್ ಮದೀನಾ ಬೆಳ್ಳಿಹಬ್ಬದ ಪ್ರಚಾರ ಸಮ್ಮೇಳನ
ಮಂಗಳೂರು, ಜ.6: ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನಲ್ಲಿ ಫೆಬ್ರವರಿ 1,2,3ರಂದು ನಡೆಯಲಿರುವ ಐತಿಹಾಸಿಕ ಬೆಳ್ಳಿಹಬ್ಬ ಕಾರ್ಯಕ್ರಮದ ಪ್ರಚಾರರ್ಥವಾಗಿ ಬಹರೈನ್ ಅಲ್ ಮದೀನಾ ಸಮಿತಿಯ ವತಿಯಿಂದ ಪ್ರಚಾರ ಸಮ್ಮೇಳನ ಜರುಗಿತು.
ಸಮಿತಿಯ ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಸಿದ್ದೀಕ್ ಮುಸ್ಲಿಯಾರ್ ಮಂಜನಾಡಿ ದುಆಗೈದರು. ಕೆಸಿಎಫ್ ರಾಷ್ಟ್ರೀಯ ಸಮಿತಿಯ ಸಂಘಟನಾ ಕಾರ್ಯದರ್ಶಿ ಸಮದ್ ಉಜಿರೆಬೆಟ್ಟು ಕಿರಾಅತ್ ಪಠಿಸಿದರು. ಅಲ್ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸೃ್ನ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಲ್ ಮದೀನಾ ಸಂಸ್ಥೆಯ ಶಿಲ್ಪಿಅಲ್‌ಹಾಜ್ ಅಬ್ಬಾಸ್ ಮುಸ್ಲಿಯಾರ್ ಸಂಸ್ಥೆಯ ಸೇವೆಯಲ್ಲಿ ಸರ್ವರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ಎಸೆಸ್ಸೆಫ್ ಕೇರಳ ರಾಜ್ಯಾಧ್ಯಕ್ಷ ಡಾ.ಫಾರೂಕ್ ನಈಮಿ, ಐಸಿಎಫ್ ಬಹರೈನ್‌ನ ನೇತಾರರಾದ ಅಲ್ಹಾಫಿಳ್ ಅಝ್ಹರ್ ತಂಙಳ್, ಝೈನುದ್ದೀನ್ ಸಖಾಫಿ, ನ್ಯಾಯವಾದಿ ಎಂ.ಸಿ.ಕರೀಂ, ಲತೀಫಿ ಉಸ್ತಾದ್, ಆರ್‌ಎಸ್‌ಸಿ ಅಧ್ಯಕ್ಷ ಅಬ್ದುರ್ರಹೀಂ ಸಖಾಫಿ , ಕೆಸಿಎಫ್ ಐಎನ್‌ಸಿ ರಿಲೀಫ್ ವಿಂಗ್ ಅಧ್ಯಕ್ಷ ಜಮಾಲುದ್ದೀನ್ ವಿಟ್ಟಲ್, ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಫಾರೂಕ್ ಎಸ್.ಎಂ, ದ.ಕ. ಜಿಲ್ಲಾ ಅಲ್ಪಸಂಖ್ಯಾತ ಸಮಿತಿಯ ಅಧ್ಯಕ್ಷ ಎನ್.ಎಸ್. ಕರೀಂ, ಅಬ್ದುರ್ರಝಾಕ್ ಹಾಜಿ ಮೆಟೆಲ್ಕೋ, ಝಿಂಜ್ ಮಸ್ಜಿದ್ ಇಮಾಮ್ ಅಶೈಖ್ ಝೈನುಲ್ ಆಬಿದೀನ್, ಕೆಸಿಎಫ್ ಬಹರೈನ್ ಉರ್ದು ವಿಂಗ್ ನಾಯಕ ಗಯಾಝುದ್ದೀನ್ ಮೈಸೂರು, ಅಲ್ಮದೀನಾ ಸೌದಿ ಅರೇಬಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮಲ್ಲೂರು, ಬಹರೈನ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮಂಜನಾಡಿ, ಕೋಶಾಧಿಕಾರಿ ಇಬ್ರಾಹೀಂ ಸಅದಿ ಉಪಸ್ಥಿತರಿದ್ದರು.
ಅಬ್ದುಲ್ ಮಜೀದ್ ಸಅದಿ ಪೆರ್ಲ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಿತು. ಹಾರಿಸ್ ಸಂಪ್ಯ ಸ್ವಾಗತಿಸಿದರು. ಟಿ.ಎಂ ಅಬೂಬಕರ್ ಮುಸ್ಲಿಯಾರ್ ವಂದಿಸಿದರು.