ಸುರಿಬೈಲು ಉಸ್ತಾದ್ ಆಂಡ್ ನೇರ್ಚೆ, ಅನುಸ್ಮರಣೆ - ಸೌಹಾರ್ದ ಸಂಗಮ
ಬಂಟ್ವಾಳ, ಜ. 6: ಸುರಿಬೈಲು ದಾರುಲ್ ಅಶ್ ಅರಿಯ್ಯದ ವತಿಯಿಂದ ನಡೆದ ಶೈಖುನಾ ಸುರಿಬೈಲು ಉಸ್ತಾದ್ ಅವರ 17ನೆ ಆಂಡ್ ನೇರ್ಚೆ ಹಾಗೂ ಪಿಎ ಉಸ್ತಾದ್ ಅವರ ಅನುಸ್ಮರಣೆ ಸಮಾರೋಪ ಹಾಗೂ ಸೌಹಾರ್ದ ಸಂಗಮ ಇತ್ತೀಚೆಗೆ ನಡೆಯಿತು.
ಅಬ್ದುಲ್ ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ದುವಾಃ ಆಶೀರ್ವಚನ ನೀಡಿ ಮಾತನಾಡಿ, ಉಲಮಾಗಳನ್ನು ನೆನೆಪಿಸುವ ಕಾರ್ಯಗಳು ನಡೆಯುತ್ತಿದೆ. ಉಲಮಾ, ಉಮರಾಗಳನ್ನು ಗೌರವದಿಂದ ಕಾಣಬೇಕು. ಪ್ರವಾದಿ ಅವರ ಜೀವನ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನ ನಡೆಸಬೇಕು ಎಂದು ಹೇಳಿದರು.
ಮೌಲಾನಾ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಅವರು ಮಾತನಾಡಿ, ನಾವು ಸತ್ಯದ ಕಡೆಯಲ್ಲಿ ನಿಲ್ಲಬೇಕು. ಸುನ್ನತ್ ಜಮಾಅತ್‍ನಡಿಯಲ್ಲಿ ಕಾರ್ಯ ನಿರ್ವಹಿಸಬೇಕು. ತಪ್ಪು ಮಾಡಿದ ವ್ಯಕ್ತಿಗೆ ಬುದ್ಧಿ ಹೇಳಿ ಅವರನ್ನು ಸರಿ ದಾರಿಗೆ ತರಬೇಕು ಇದು ಮಹತ್ವದ ಕಾರ್ಯವಾಗಿದೆ. ಪ್ರವಾದಿ ಅವರು ನಮಗೆ ಉತ್ತಮ ಸ್ವಭಾವದ ವ್ಯಕ್ತಿತ್ವ ಕಳಿಸಿಕೊಟ್ಟಿದ್ದಾರೆ. ಅದನ್ನು ಸಮಾಜಕ್ಕೆ ತಿಳಿಸುವ ಕಾರ್ಯ ನಡೆಯಬೇಕು. ಪ್ರವಾದಿ ಅವರ ಜೀವನ ಆದರ್ಶವನ್ನು ಪಾಲನೆ ಮಾಡಬೇಕು. ಇದರಿಂದ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಮಹ್‍ಮೂದುಲ್ ಫೈಝಿ ವಾಲೆಮುಂಡೋವ್ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಅಶ್ರಫ್ ತಂಙಳ್ ಆದೂರು ಕಾರ್ಯಕ್ರಮ ಉದ್ಘಾಟಿಸಿದರು.
ಅಂದು ಸಂಜೆ ಮಖ್‍ಬರ ಝಿಯಾರತ್, ಜಲಾಲಿಯ್ಯ ರಾತೀಬ್, ಬುರ್ದಾ ಮಜ್ಲಿಸ್, ಸಮಾರೋಪ ಕಾರ್ಯಕ್ರಮ ನಡೆಯಿತು. ಪಿ.ಎ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮದಲ್ಲಿ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್, ಸೈಯದ್ ಇಬ್ರಾಹಿಂ ಪೂಕುಂಞಿ ತಂಙಳ್ ಉದ್ಯಾವರ, ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಅಸೈಯದ್ ಶಿಹಾಬುದ್ದೀನ್ ತಂಙಳ್ ಮದಕ, ಸೈಯದ್ ಜಲಾಲುದ್ದೀನ್ ತಂಙಳ್ ಮಳ್‍ಹರ್, ಸೈಯದ್ ಶಿಹಾಬುದ್ದೀನ್ ತಂಙಳ್ ತಲಕ್ಕಿ, ಸೈಯದ್ ಖಾಸಿಂ ತಂಙಳ್ ಸಾಲೆತ್ತೂರು, ಶೈಖುನಾ ಶರಫುಲ್ ಉಲಮಾ ಮಂಜನಾಡಿ ಉಸ್ತಾದ್, ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್, ಶೈಖುನಾ ಮಂಚಿ ಉಸ್ತಾದ್, ಜಿಪಂ ಸದಸ್ಯ ಎಂ.ಎಸ್ ಮುಹಮ್ಮದ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಕೊಳ್ನಾಡು ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಬೋಳಂತೂರು ಗ್ರಾಪಂ ಉಪಾಧ್ಯಕ್ಷ ಚಂದ್ರಹಾಸ ರೈ, ಸ್ವಾಗತ ಸಮಿತಿ ಅಧ್ಯಕ್ಷ ಎನ್ ಸುಲೈಮಾನ್ ಹಾಜಿ ನಾರ್ಶ, ಸಂಸ್ಥೆಯ ಉಪಾಧ್ಯಕ್ಷ ಅಬೂಬಕರ್ ಮುಸ್ಲಿಯಾರ್ ಬೊಳ್ಮಾರ್, ವ್ಯವಸ್ಥಾಪಕ ಮುಹಮ್ಮದಾಲಿ ಸಖಾಫಿ, ಎಸ್.ಎಂ.ಎ ರಾಜ್ಯ ಉಪಾಧ್ಯಕ್ಷ ಹಾಜಿ ಕೆ.ಎ ಹಮೀದ್ ಕೊಡಂಗಾಯಿ, ಕೋಶಾಧಿಕಾರಿ ಸಿ.ಎಚ್ ಯೂಸುಫ್ ಮದನಿ, ಕನ್ವೀನರ್ ಅಬ್ದುಲ್ಲ ಮುಸ್ಲಿಯಾರ್ ಬೊಳ್ಮಾರ್, ಸಿ.ಚ್ ಅಬ್ದುಲ್ ರಶೀದ್ ಹನೀಫಿ, ಸಿ.ಎಚ್ ಅಬೂಬಕ್ಕರ್ ನಾರ್ಶ ಮೊದಲಾದವರು ಉಪಸ್ಥಿತರಿದ್ದರು.