ಕ್ಯಾಟ್‌ ಪರೀಕ್ಷೆ ಫಲಿತಾಂಶ ಪ್ರಕಟ: ಉಡುಪಿಯ ನಿರಂಜನ್‌ ದೇಶಕ್ಕೆ ಪ್ರಥಮ

Update: 2019-01-06 15:47 GMT

ಉಡುಪಿ, ಜ. 6: ಈ ಸಾಲಿನ ಕ್ಯಾಟ್‌ (ಸಾಮಾನ್ಯ ಪ್ರವೇಶ ಪರೀಕ್ಷೆ) ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಉಡುಪಿಯ ನಿರಂಜನ ಪ್ರಸಾದ್‌ ಶೇ. 100 ಫಲಿತಾಂಶ ಪಡೆದು ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ದೇಶದ ಪ್ರತಿಷ್ಠಿತ ಐಐಎಂ ಹಾಗೂ ಬ್ಯುಸಿನೆಸ್‌ ಸ್ಕೂಲ್‌ಗಳಲ್ಲಿ ಪ್ರವೇಶ ಪಡೆಯಲು ನವೆಂಬರ್‌ನಲ್ಲಿ ಕ್ಯಾಟ್‌ ಪರೀಕ್ಷೆ ನಡೆದಿತ್ತು. ಪರೀಕ್ಷೆ ಬರೆದ 2.9 ಲಕ್ಷ ವಿದ್ಯಾರ್ಥಿಗಳ ಪೈಕಿ ದೇಶದ 11 ಮಂದಿ ಮಾತ್ರ ಶೇ. 100 ಫಲಿತಾಂಶ ಪಡೆದಿದ್ದಾರೆ. ಇವರ ಪೈಕಿ ಕರ್ನಾಟಕದ ಏಕೈಕ ವಿದ್ಯಾರ್ಥಿ ನಿರಂಜನ ಪ್ರಸಾದ್.

ನಿರಂಜನ ಪ್ರಸಾದ್ ಉಡುಪಿಯ ಮಣಿಪಾಲದವರು. ಪ್ರಸ್ತುತ ಮದ್ರಾಸ್‌ ಐಐಟಿ (ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ)ಯಲ್ಲಿ ಮೆಕಾನಿಕಲ್‌ ಡ್ಯುಯಲ್‌ ಡಿಗ್ರಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಅವರ ತಂದೆ ಜಯದೇವ ಪ್ರಸಾದ್ ಮೊಳೆಯಾರ್ ಮೂಡುಬಿದಿರೆಯ ಮೈಟ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಎಂಬಿಎ ವಿಭಾಗದ ಮುಖ್ಯಸ್ಥರು. ತಾಯಿ ಕೀರ್ತನಾ ಪ್ರಸಾದ್‌ ಮಣಿಪಾಲ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು.

ಜಿಆರ್‌ಇನಲ್ಲೂ ಸಾಧನೆ 

ನಿರಂಜನ್‌ ಪ್ರಸಾದ್ ಈಚೆಗೆ ನಡೆದ ಜಿಆರ್‌ಇ ಪರೀಕ್ಷೆಯಲ್ಲಿ 340 ಅಂಕಗಳಿಗೆ 338 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News