ಉಡುಪಿ: ಸಚಿವೆಯಿಂದ ಅಂಬೇಡ್ಕರ್ ಸೌಧ ಉದ್ಘಾಟನೆ
Update: 2019-01-06 21:52 IST
ಉಡುಪಿ, ಜ.6: ಬನ್ನಂಜೆಯಲ್ಲಿ ಶಿವ ಸಮಾಜ ಸಂಘವು ನೂತನವಾಗಿ ನಿರ್ಮಿಸಿದ ಸಂಘದ ಆಡಳಿತ ಕಟ್ಟಡ ‘ಅಂಬೇಡ್ಕರ್ ಸೌಧ’ವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ರವಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವ, ಅಲ್ಪಸಂಖ್ಯಾತ ನಿಗಮದ ಮಾಜಿ ಅಧ್ಯಕ್ಷ ಎಂ.ಎ.ಗಫೂರ್, ಶಿವ ಸಮಾಜ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.