ವಳಚ್ಚಿಲ್: ರಿಕ್ಷಾ ಪಾರ್ಕ್ ಮೇಲ್ಛಾವಣಿ ಉದ್ಘಾಟನೆ

Update: 2019-01-06 16:47 GMT

ಫರಂಗಿಪೇಟೆ, ಜ. 6: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹಾಗೂ ತಾಲೂಕು ಪಂಚಾಯತ್ ಸದಸ್ಯ ಅಬ್ದುಲ್ ಸಮದ್ ಅವರ ಅನುದಾನದಲ್ಲಿ ವಳಚ್ಚಿಲ್ ರಿಕ್ಷಾ ಪಾರ್ಕ್ ಗೆ ಮೇಲ್ಛಾವಣಿ ಮತ್ತು ಇಂಟರ್ ಲಾಕ್ ಅಳವಡಿಸಲಾಗಿದ್ದು ಇದರ ಉದ್ಘಾಟನೆಯನ್ನು ಐವನ್ ಡಿಸೋಜ ರವಿವಾರ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ರಿಕ್ಷಾ ಚಾಲಕರು ಶ್ರಮಿಕ ವರ್ಗವಾಗಿದ್ದು ತನ್ನ ಕುಟುಂಬದ ನಿರ್ವಹಣೆಯೊಂದಿಗೆ ಸಮಾಜ ಸೇವೆಯಲ್ಲಿಯೂ ತೊಡಗಿಕೊಂಡ ಅನೇಕ ಚಾಲಕರಿದ್ದಾರೆ. ರಿಕ್ಷಾ ಚಾಲಕರ ಅನುಕೂಲತೆಗಾಗಿ ಈಗಾಗಲೇ ಜಿಲ್ಲೆಯ ಹಲವು ರಿಕ್ಷಾ ಪಾರ್ಕ್ ಗೆ ಮೇಲ್ಛಾವಣಿ ಹಾಕಲಾಗಿದ್ದು ಇದನ್ನು ಇನ್ನೂ ವಿಸ್ತರಿಸುವ ಯೋಜನೆ ಇದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಳಚ್ಚಿಲ್ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಅಬ್ದುಲ್ ರಝಾಕ್ ವಹಿಸಿದ್ದರು. ಅತಿಥಿಗಳಾಗಿ ತಾಲೂಕು ಪಂಚಾಯತ್ ಸದಸ್ಯ ಸಮದ್ ಅಡ್ಯಾರ್, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಅಡ್ಯಾರ್ ಗ್ರಾಪಂ ಅಧ್ಯಕ್ಷೆ ಪ್ರತಿಮಾ, ಪಿಡಿಒ ಕೃಷ್ಣ ನಾಯಕ್, ವಾಮಂಜೂರು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಸ್ಎಚ್ ಸಿದ್ದೇಗೌಡ ಭಜಂತ್ರಿ, ಸೆಕ್ರೆಟರಿ ಆಫ್ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಐಸಾಕ್ ರಿಚರ್ಡ್, ಉದ್ಯಮಿ ಕೆಇಎಲ್ ಇಸ್ಮಾಯಿಲ್, ವಳಚ್ಚಿಲ್ ಮಸೀದಿ ಅಧ್ಯಕ್ಷ ವಿಎಸ್ ಹಮೀದ್, ವಳಚ್ಚಿಲ್ ಪದವು ಮಸೀದಿ ಅಧ್ಯಕ್ಷ ಅಮೀರ್, ಎಮ್.ಎಸ್.ಕೆ ಗ್ರೂಪ್ ವಳಚ್ಚಿಲ್ ಕಮಾಲ್, ಅಡ್ಯಾರ್ ಗ್ರಾಪಂ ಸದಸ್ಯ ಯಾಸೀನ್, ಉಬೈದುಲ್ಲಾ, ಕೃಷ್ಣ, ವಿ ಅಬ್ಬಾಸ್, ಕೇಂದ್ರ ಮಸೀದಿ ವಳಚ್ಚಿಲ್ ಕಾರ್ಯದರ್ಶಿ ಮಹಮ್ಮದ್ ಅಸ್ಲಮ್, ರಿಕ್ಷಾ ಪಾರ್ಕ್ ಮಾಜಿ ಅಧ್ಯಕ್ಷ ಫಾರೂಕು, ಸಿದ್ದೀಕ್ ಝುಬೈರ್, ಖೋಶಾಧಿಕಾರಿ ಅಬ್ಬಾಸ್, ಕಾರ್ಯದರ್ಶಿ ಇಮ್ರಾನ್, ಉಪಾಧ್ಯಕ್ಷ ಶಬೀರ್, ಹರೀಶ್, ಪ್ರವೀಣ್, ಜೋಸೆಫ್, ಜೊತೆ ಕಾರ್ಯದರ್ಶಿ ಇಲ್ಯಾಸ್ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಲವು ಸಾಧಕರನ್ನು ಸನ್ಮಾನಿಸಲಾಯಿತು. ಮುಝೈದ್ ಸ್ವಾಗತಿಸಿ, ಕಾದರ್ ಫರಂಗಿಪೇಟೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News