ಚಿತ್ರಮಂದಿರದಿಂದ ಮಹಿಳೆ ನಾಪತ್ತೆ
Update: 2019-01-06 22:40 IST
ಮಣಿಪಾಲ, ಜ.6: ಮಣಿಪಾಲದ ಚಿತ್ರಮಂದಿರಕ್ಕೆ ಸಿನೆಮಾ ನೋಡಲು ಬಂದಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ವರದಿ ಯಾಗಿದೆ.
ನಾಪತ್ತೆಯಾದವರನ್ನು ಲಾಯ್ಡ್ ಮೊಂತೆರೋ ಎಂಬವರ ಪತ್ನಿ ಜೇನ್ ಡಿಕ್ರೂಜ್ (28) ಎಂದು ಗುರುತಿಸಲಾಗಿದೆ. ಜ.4ರಂದು ಸಂಜೆ ಚಿತ್ರಮಂದಿರಕ್ಕೆ ಪತಿ ಜೊತೆ ಬಂದಿದ್ದ ಜೇನ್ ಡಿಕ್ರೂಜ್ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.