×
Ad

ಉಡುಪಿ: ಪ್ರವಾದಿ ನಿಂದಕನ ವಿರುದ್ಧ ಕ್ರಮಕ್ಕೆ ಆಗ್ರಹ

Update: 2019-01-07 20:08 IST

ಉಡುಪಿ, ಜ.7: ಪ್ರವಾದಿ ಮುಹಮ್ಮದ್ (ಸ.ಅ) ಅವರನ್ನು ಅವಹೇಳನ ಮಾಡಿರುವ ಸುವರ್ಣ ಚಾನಲ್ ನಿರೂಪಕನ ವಿರುದ್ಧ ಸರಕಾರ ಈವರೆಗೆ ಪ್ರಕರಣ ದಾಖಲಿಸಿ ಬಂಧಿಸದಿರುವುದು ದುರದೃಷ್ಟಕರ ಹಾಗೂ ಘೋರ ಅನ್ಯಾಯ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ. ಮೊಯಿದಿನಬ್ಬ ತಿಳಿಸಿದ್ದಾರೆ.

ಯಾರೋ ಹಿಂದೂ ಧರ್ಮವನ್ನು ಅವಮಾನಿಸಿದರೆಂಬ ಕಾರಣಕ್ಕೆ ಪ್ರವಾದಿಯನ್ನು ಅವಮಾನಿಸಿರುವುದು ರಾಜ್ಯದಲ್ಲಿ ಕೋಮು ದ್ವೇಷವನ್ನು ಹುಟ್ಟು ಹಾಕುವ ಉದ್ದೇಶವನ್ನು ಹೊಂದಿದೆ. ಇದು ತಿಳಿದರು ಕೂಡ ಅವನ ಮೇಲೆ ಕಾನೂನು ಕ್ರಮ ಜರುಗಿಸದೇ ಇರುವುದು ರಾಜ್ಯದ ಮುಸ್ಲಿಮರು ಸರಕಾರ ಮತ್ತು ಅಡಳಿತ ವ್ಯವಸ್ಥೆಯ ಮೇಲೆ ವಿಶ್ವಾಸ ಕಳೆದುಕೊಳ್ಳುವಂತಾಗಿದೆ ಎಂದು ಅವರು ಹೇಳಿಕೆಯಲ್ಲಿ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News