×
Ad

ಪ್ರತಿಭಾನ್ವಿತರು, ಕಲಾತಂಡಗಳಿಂದ ಅರ್ಜಿ ಆಹ್ವಾನ

Update: 2019-01-07 21:38 IST

ಮಂಗಳೂರು, ಜ.7: ಜ. 29,30,31ರಂದು ನಗರದ ಪುರಭವನದಲ್ಲಿ ನಡೆಯಲಿರುವ 23ನೇ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರೌಢ-ಪ್ರತಿಭಾನ್ವಿತ ಕಲಾವಿದರಿಗೆ, ಉದಯೋನ್ಮುಖ ಕಲಾ ಪ್ರತಿಭೆಗಳಿಗೆ ಭರತನಾಟ್ಯ, ಶಾಸ್ತ್ರೀಯ ಸಂಗೀತ, ವಚನ, ಸುಗಮ ಸಂಗೀತ, ಭಾವಗೀತೆ, ಗಮಕ ವಾಚನ, ಕಾವ್ಯ ವಾಚನ, ಚಿತ್ರಕಲೆ, ದಾಸ ಸಂಕೀರ್ತನೆ, ಯಕ್ಷಗಾನ ತಾಳಮದ್ದಳೆ, ಜನಪದ ಪ್ರಕಾರಗಳು, ವಾದ್ಯ ಸಂಗೀತವಾದನಗಳು, ಹರಿಕಥೆ, ರಂಗೋಲಿ, ನಾಟಕ, ಅಣಕು ಪ್ರದರ್ಶನ (ಮಿಮಿಕ್ರಿ), ಏಕಪಾತ್ರಾಭಿನಯ ಇತ್ಯಾದಿ ಸಾಂಸ್ಕೃತಿಕ ಆಯಾಮಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಆಸಕ್ತ ತಂಡಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ಹಾಗೂ ವೈಯಕ್ತಿಕ ಪ್ರತಿಭೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರತಿಭೆಗೆ ಅನುಗುಣವಾಗಿ ಏಕವ್ಯಕ್ತಿಗಳಿಗೆ 5ರಿಂದ 15 ನಿಮಿಷ, ತಂಡಗಳಿಗೆ 15 ನಿಮಿಷದಿಂದ 1:30 ಗಂಟೆಗಳ ಕಾಲ ಅವಕಾಶ ಕಲ್ಪಿಸಲಾಗುವುದು.

ತಂಡಗಳು ಮತ್ತು ವ್ಯಕ್ತಿಗಳು ಸ್ವವಿವರದೊಂದಿಗೆ ಸಂಚಾಲಕರು, ಸಾಂಸ್ಕೃತಿಕ ಸಮಿತಿ, ದ.ಕ. ಜಿಲ್ಲಾ ಕಸಾಪ ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣ ಸಂಕೀರ್ಣ, ಕೊಡಿಯಾಲ್‌ಬೈಲ್, ಮಂಗಳೂರು-3 ಈ ವಿಳಾಸಕ್ಕೆ ಕಳುಹಿಸಿಕೊಡಬೇಕು. ಗುಣಮಟ್ಟದ ಆಧಾರದಲ್ಲಿ ಆಯ್ಕೆ ಸಮಿತಿಯಿಂದ ಆಯ್ಕೆಗೊಂಡ ತಂಡಗಳಿಗೆ ಸಾಂಕೇತಿಕ ಗೌರವ ಸಂಭಾವನೆ, ಪ್ರಶಸ್ತಿ ಪತ್ರ ಮತ್ತು ಫಲಕಗಳನ್ನು ನೀಡಿ 3 ದಿನಗಳಲ್ಲಿ ಯಾವುದಾದರೊಂದು ದಿನ ಅವಕಾಶ ಕಲ್ಪಿಸಲಾಗುವುದು ಎಂದು ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News