ಅಸಹಿಷ್ಣುತೆ ಹೇಳಿಕೆ: ನಾಸಿರುದ್ದೀನ್ ಶಾ ಬೆಂಬಲಕ್ಕೆ ಅಮರ್ತ್ಯ ಸೇನ್

Update: 2019-01-07 16:27 GMT

ಮುಂಬೈ,ಜ.7: ಅಸಹಿಷ್ಣುತೆ ಬಗ್ಗೆ ನಟ ನಸೀರುದ್ದೀನ್ ಶಾ ನೀಡಿರುವ ಹೇಳಿಕೆಗೆ ನೋಬೆಲ್ ವಿಜೇತ ಅಮರ್ತ್ಯ ಸೇನ್ ಬೆಂಬಲ ಸೂಚಿಸಿದ್ದಾರೆ. ರಾಮ ಮಂದಿರ ಮತ್ತು ಎಲ್ಲ ವಯೋಮಾನದ ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶಕ್ಕೆ ಅನುಮತಿ ಮುಂತಾದ ವಿಷಯಗಳು ಚುನಾವಣೆಯ ಸಮಯದಲ್ಲಿ ಪ್ರಸ್ತಾಪವಾಗುತ್ತವೆ ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿ ಚುನಾವಣೆಯ ಸಮಯದಲ್ಲೇ ರಾಮ ಮಂದಿರ ಮತ್ತು ಮಹಿಳೆಯರಿಗೆ ಶಬರಿಮಲೆ ಪ್ರವೇಶ ಮುಂತಾದ ವಿಷಯಗಳು ಚರ್ಚೆಗೆ ಬರುವುದು ಆಶ್ಚರ್ಯ. ಜಗತ್ತಿನ ಇತರ ಕಡೆಗಳಲ್ಲಿ ಪ್ರಮುಖ ವಿಷಯವಾಗುತ್ತಿದ್ದ ಅದೆಷ್ಟೋ ಸಮಸ್ಯೆಗಳು ಇಲ್ಲಿ ಗಣನೆಗೇ ಬರುವುದಿಲ್ಲ. ಮಂದಿರ, ಮಹಿಳಾ ಪ್ರವೇಶ ಇತ್ಯಾದಿ ಮುಖ್ಯ ವಿಷಯಗಳೇ? ಎಂದು ಕೊಲ್ಕತಾದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಸೇನ್ ತಿಳಿಸಿದ್ದಾರೆ. ನಟ ನಾಸಿರುದ್ದೀನ್ ಶಾ ಹೇಳಿಕೆಗೆ ತನ್ನ ಬೆಂಬಲ ಸೂಚಿಸಿದ ಸೇನ್, ಶಾಗೆ ತೊಂದರೆ ನೀಡುವಂತ ಯಾವುದೇ ಪ್ರಯತ್ನಗಳನ್ನು ನಾವು ಪ್ರತಿಭಟಿಸಬೇಕಿದೆ. ದೇಶದಲ್ಲಿ ಸದ್ಯ ನಡೆಯುತ್ತಿರುವುದು ಆಕ್ಷೇಪಾರ್ಹವಾಗಿದ್ದು ಕೂಡಲೇ ನಿಲ್ಲಬೇಕಿದೆ. ದೇಶದ ಸದ್ಯದ ಪರಿಸ್ಥಿತಿಯಲ್ಲಿ ಬದಲಾವಣೆಯಾಗಬೇಕಿದೆ ಎಂದು ಸೇನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News