×
Ad

ಉಡುಪಿ: ಜ.9ರಂದು ಸಾಧಕರುಗಳಿಗೆ ಅಭಿನಂದನಾ ಸಂಭ್ರಮ

Update: 2019-01-07 22:04 IST

ಉಡುಪಿ, ಜ.7: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಸಾಧಕರುಗಳಿಗೆ ಅಭಿನಂದನಾ ಸಂಭ್ರಮ ಕಾರ್ಯಕ್ರಮವನ್ನು ಉಡುಪಿ ಚಿತ್ತ ರಂಜನ್ ಸರ್ಕಲ್ ಬಳಿಯ ಹೊಟೇಲ್ ಸ್ವದೇಶ್ ಹೆರಿಟೆಜ್ ನಲ್ಲಿ ಜ. 9ರಂದು ಸಂಜೆ ನಾಲ್ಕು ಗಂಟೆಗೆ ಆಯೋಜಿಸಲಾಗಿದೆ.

ಶ್ರೇಷ್ಠ ಸಹಕಾರಿ ಪ್ರಶಸ್ತಿ ಪುರಸ್ಕ್ರತ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಉದ್ಯಮಿ ಮನೋಹರ ಶೆಟ್ಟಿ, ಯುವ ಸಾಹಿತಿ ತಾರಾನಾಥ್ ಮೇಸ್ತ ಶಿರೂರು ಮತ್ತು ಮುಳುಗುತಜ್ಞ ಅರುಣ್ ಕುಮಾರ್ ದೆಂದುರುಕಟ್ಟೆ ಅವರನ್ನು ಸನ್ಮಾನಿಸಲಾಗುವುದು.

ಈ ಕಾರ್ಯಕ್ರಮದಲ್ಲಿ ಉಡುಪಿ ಮದರ್ ಆಫ್ ಸಾರೋಸ್ ಚರ್ಚ್‌ನ ಧರ್ಮಗುರು ಫಾ.ವಲೇರಿನ್ ಮೆಂಡೋನ್ಸಾ, ಲಯನ್ಸ್ ಗವರ್ನರ್ ಡಾ. ತಲ್ಲೂರು ಶಿವರಾಮ ಶೆಟ್ಟಿ, ಸದ್ಭಾವನಾ ಸಮಿತಿಯ ಕಾರ್ಯದರ್ಶಿ ಅಕ್ಬರ್ ಅಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News