ಮಣಿಪಾಲ: ತಂಬಾಕು ನಿಯಂತ್ರಣ ಘಟಕದಿಂದ ದಾಳಿ
Update: 2019-01-07 22:05 IST
ಉಡುಪಿ, ಜ.7: ಜಿಲ್ಲೆಯಲ್ಲಿ ಕೋಟ್ಪಾ-2003 ಕಾಯ್ದೆಯನ್ನು ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳದ ವತಿಯಿಂದ ಉಡುಪಿ ತಾಲೂಕಿನ ಮಣಿಪಾಲದ ಡಿ.ಸಿ ಕಛೇರಿ ರಸ್ತೆ ಮತ್ತು ಮಣಿಪಾಲದ ಎಂಡ್‌ಪಾಯಿಂಟ್ ವ್ಯಾಪ್ತಿ ಪ್ರದೇಶಗಳಲ್ಲಿ ತಂಬಾಕು ಮಾರಾಟದ ಅಂಗಡಿ ಗಳು, ಹೋಟೇಲ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ದಾಳಿ ನಡೆಸಿ 13 ಪ್ರಕರಣ ದಾಖಲಿಸಿ 3650 ರೂ. ದಂಡ ವಸೂಲಿ ಮಾಡಲಾಯಿತು.
ದಾಳಿಯಲ್ಲಿ ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಆನಂದ ಗೌಡ, ಆಹಾರ ಸುರಕ್ಷತಾ ಅಧಿಕಾರಿ ವೆಂಕಟೇಶ್, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಕೃಷ್ಣಪ್ಪ, ರಾಷ್ಟೀಯ ತಂಬಾಕು ನಿಯಂತ್ರಣಾ ಘಟಕದ ವತಿಯಿಂದ ಎನ್.ಟಿ.ಸಿ.ಪಿ. ಸಾಮಾಜಿಕ ಕಾರ್ಯಕರ್ತೆ ಶೈಲಾ ಶಾಮನೂರು, ಮಣಿಪಾಲ ಪೋಲೀಸ್ ಠಾಣೆಯ ಆರಕ್ಷ ರೇವಣ ಸಿದ್ದಪ್ಪಉಪಸ್ಥಿತರಿದ್ದರು