×
Ad

ಪೊಲೀಸ್ ಠಾಣೆ ಸಮೀಪ ಬಾಂಬ್ ಎಸೆದ ಆರೆಸ್ಸೆಸ್ ಕಾರ್ಯಕರ್ತನ ಬಂಧನ

Update: 2019-01-07 22:15 IST

ಹೊಸದಿಲ್ಲಿ, ಜ. 7: ನೆಡುಮಂಗಾಡ್ ಪೊಲೀಸ್ ಠಾಣೆ ಸಮೀಪ ಕಚ್ಚಾ ಬಾಂಬ್ ಎಸೆದ ಆರೆಸ್ಸೆಸ್ ಕಾರ್ಯಕರ್ತ ಎನ್. ನಿಶಾಂತ್ ನನ್ನು ಸೋಮವಾರ ಬಂಧಿಸಲಾಗಿದೆ. ಶಬರಿಮಲೆ ಕರ್ಮ ಸಮಿತಿ ಕೇರಳದಲ್ಲಿ ಜನವರಿ 3ರಂದು ಕರೆ ನೀಡಿದ್ದ ರಾಜ್ಯ ವ್ಯಾಪಿ ಹರತಾಳದ ಸಂದರ್ಭ ಸಂಭವಿಸಿದ 3 ಸಾಮೂಹಿಕ ಹಿಂಸಾಚಾರದ ಘಟನೆಗಳಿಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನೆ ಸಂದರ್ಭ ಪೊಲೀಸ್ ಜೀಪ್ ಸುತ್ತುವರಿದು ದಾಳಿ ನಡೆಸಿದ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತ ಪಿ. ಪ್ರೀತೇಶ್ ನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಹಿಂಸಾಚಾರದಲ್ಲಿ ಘಟನೆಯೊಂದರಲ್ಲಿ ಬೇಕಾದವನಾಗಿರುವ ಆರೆಸ್ಸೆಸ್ ಕಾರ್ಯಕರ್ತ ಹಾಗೂ ಮುಖ್ಯ ಆರೋಪಿ ಪ್ರವೀಣ್ ತಲೆಮರೆಸಿಕೊಂಡಿ ದ್ದಾನೆ ಎಂದು ಅವರು ತಿಳಿಸಿದ್ದಾರೆ. ಪ್ರತಿಭಟನೆ ಸಂದರ್ಭ ಎರಡು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಲಾಗಿದೆ ಹಾಗೂ ಹಲವು ಸಿಪಿಎಂ ಕಚೇರಿಗಳಲ್ಲಿ ದಾಂಧಲೆ ನಡೆಸಲಾಗಿದೆ.

ಬಂದ್ ಬಿಜೆಪಿ ಹಾಗೂ ಸಿಪಿಐ (ಎಂ) ಕಾರ್ಯಕರ್ತರ ನಡುವಿನ ಕಾಳಗವಾಗಿ ಮಾರ್ಪಟ್ಟಿತ್ತು. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಅಶ್ರವಾಯು ಸೆಲ್‌ಗಳನ್ನು ಸಿಡಿಸಿದ್ದರು. 31 ಪೊಲೀಸರು ಗಾಯಗೊಂಡಿದ್ದರು. ಕೇರಳದ ರಾಜ್ಯ ಸ್ವಾಮಿತ್ವದ 100 ಬಸ್‌ಗಳಿಗೆ ಹಾನಿ ಆಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News