ಡಾ.ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯಕ್ಕೆ 2 ರ್ಯಾಂಕ್
Update: 2019-01-07 22:27 IST
ಉಡುಪಿ, ಜ.8: ಮಂಗಳೂರು ವಿವಿ ನಡೆಸಿದ ಎರಡು ವರ್ಷಗಳ ಬಿ.ಎಡ್ ಪದವಿ ಪರೀಕ್ಷೆಯಲ್ಲಿ ಉಡುಪಿಯ ಡಾ.ಟಿ.ಎಂ.ಎ.ಪೈ ಶಿಕ್ಷಣ ಕಾಲೇಜಿನ ಪ್ರಜ್ಞಾ ಜೆ ಅಂಚನ್ ಎರಡನೆಯ ರ್ಯಾಂಕನ್ನೂ ರೋಲ್ವಿನ್ ಜಾಯ್ ಆರ್ಹಾನ್ನ ಏಳನೆಯ ರ್ಯಾಂಕನ್ನೂ ಗಳಿಸಿದ್ದಾರೆ.
ಎರಡು ವರ್ಷಗಳ ಬಿ.ಎಡ್ ವ್ಯಾಸಂಗ ಕ್ರಮದ ಕಾಲೇಜಿನ ಮೊದಲ ತಂಡದ 46 ವಿದ್ಯಾರ್ಥಿ ಶಿಕ್ಷಕರು ಪರೀಕ್ಷೆಗೆ ಹಾಜರಾಗಿದ್ದು ಎಲ್ಲ ವಿದ್ಯಾರ್ಥಿ ಗಳೂ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 38 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲೂ 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೂ, ಇಬ್ಬರು ದ್ವಿತೀಯ ಶ್ರೇಣಿಯಲ್ಲೂ ತೇರ್ಗಡೆಗೊಂಡಿದ್ದಾರೆ ಎಂದು ಕಾಲೇಜಿನ ಸಮನ್ವಯಾಧಿಕಾರಿ ಡಾ. ಮಹಾಬಲೇಶ್ವರ ರಾವ್ ತಿಳಿಸಿದ್ದಾರೆ.