ಧರ್ಮ ನಿಂದನೆ: ಆರೋಪಿ ವಿರುದ್ಧ ಪ್ರಕರಣ ದಾಖಲು
Update: 2019-01-07 22:28 IST
ಉಡುಪಿ, ಜ.7: ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ವಿವಿಧ ಧರ್ಮಗಳ ನಿಂದನೆ ಮಾಡುತ್ತಿರುವ ಕಾಲ್ತೋಡು ಗ್ರಾಮದ ಗೋರ್ಕಲ್ ನಿವಾಸಿ ಲಕ್ಷ್ಮೀಕಾಂತ್ ಬೈಂದೂರ್(27) ಎಂಬಾತನ ವಿರುದ್ಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈತ 2017ರಿಂದ ಪೇಸ್‌ಬುಕ್‌ನಲ್ಲಿ ಅಶ್ಲೀಲವಾಗಿ ವಿವಿಧ ಧರ್ಮಗಳ ನಿಂದನೆ ಮಾಡಿ ಫೋಟೋ, ಪೋಸ್ಟರ್ ಮತ್ತು ರಾಜಕೀಯ ಗಣ್ಯರ ಬಗ್ಗೆ ಕಮೆಂಟ್ ಹರಿಯಬಿಟ್ಟಿದ್ದು, ಇವುಗಳು ಸೆನ್ ಠಾಣಾ ಅರ್ಜಿ ವಿಚಾರಣೆ ಹಾಗೂ ಆತನ ಫೇಸ್‌ಬುಕ್ ಪರಿಶೀಲನೆಯಿಂದ ಕಂಡು ಬಂದಿದೆ. ಈ ಕೃತ್ಯ ದಿಂದ ವಿವಿಧ ಧರ್ಮಗಳ ಧಾರ್ಮಿಕ ಭಾವನೆ ಕೆರಳುವ ಮತ್ತು ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇರುವುದರಿಂದ ಆತನ ಕೃತ್ಯವನ್ನು ನಿಯಂತ್ರಿಸುವ ಮತ್ತು ಕಾನೂನು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸೀತಾರಾಮ ಪಿ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.