×
Ad

ಮಂಗಳೂರು: ​ವಿಎಚ್‌ಪಿ ವತಿಯಿಂದ ಭಗವಾನ್ ವಿರುದ್ಧ ಪ್ರತಿಭಟನೆ

Update: 2019-01-07 22:34 IST

ಮಂಗಳೂರು, ಜ .7: ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಸಾಹಿತಿ ಚಿಂತಕ ಭಗವಾನ್‌ರನ್ನು ಬಂಧಿಸಬೇಕು ಮತ್ತು ರಾಮ ಮಂದಿರ ಏಕೆ ಬೇಡ ಎನ್ನುವ ಕೃತಿಯಲ್ಲಿ ಶ್ರೀರಾಮನನ್ನು ಅವಹೇಳನ ಮಾಡಿದ್ದಾರೆ. ಇದರಿಂದ ನಮ್ಮ ಧಾರ್ಮಿಕ ಭಾವನೆಗೆ ನೋವಾಗಿದೆ ಈ ಹಿನ್ನೆಲೆಯಲ್ಲಿ ಭಗವಾನ್‌ರನ್ನು ಬಂಧಿಸಬೇಕು ಎಂದು ವಿಎಚ್‌ಪಿ ಮುಂಖಡರಾದ ಶಿವಾನಂದ ಮೆಂಡನ್, ಆಶಾ ಜಗದೀಶ್‌ಚಂದ್ರ, ಶರಣ್ ಪಂಪ್‌ವೆಲ್, ಮಧು ಸೂಧನ ಮೊದಲಾದವರು ಆಗ್ರಹಿಸಿದ್ದಾರೆ.

ಜೊತೆಗೆ ಈ ಪುಸ್ತಕವನ್ನು ನಿಷೇಧಿಸಬೇಕು. ಪುಸ್ತಕವನ್ನು ಪ್ರಕಟಿಸಿದ ಪ್ರಕಾಶನ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರದರ್ಶನ ನಡೆಸಿ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News