2018-19ರಲ್ಲಿ ಶೇ.7.2 ಜಿಡಿಪಿ ಬೆಳವಣಿಗೆ ನಿರೀಕ್ಷೆ: ಕೇಂದ್ರ

Update: 2019-01-07 17:33 GMT

ಹೊಸದಿಲ್ಲಿ,ಜ.7: 2017-18ರ ಶೇ.6.7ಕ್ಕೆ ಹೋಲಿಸಿದರೆ 2018-19ರಲ್ಲಿ ಒಟ್ಟಾರೆ ದೇಶೀಯ ಉತ್ಪನ್ನ ಅಥವಾ ಜಿಡಿಪಿ ಬೆಳವಣಿಗೆ ಶೇ.7.2ರಷ್ಟು ಇರುವ ನಿರೀಕ್ಷೆಯಿದೆ ಎಂದು ಸರಕಾರ ಸೋಮವಾರ ತಿಳಿಸಿದೆ.

ಆರ್ಥಿಕ ಬೆಳವಣಿಗೆ ನಿರೀಕ್ಷೆಯು ರಾಷ್ಟ್ರೀಯ ಆದಾಯ 2018-19ರ ಪ್ರಥಮ ಮುಂಗಡ ಅಂದಾಜಿನ ಭಾಗವಾಗಿದೆ. ಕೇಂದ್ರ ಬ್ಯಾಂಕ್ 2018-19ರ ದೇಶದ ಬೆಳವಣಿಗೆಯನ್ನು ಶೇ.7.4 ಎಂದು ಅಂದಾಜಿಸಿದ್ದರೆ ತೀರಾ ಖಾಸಗಿ ಅರ್ಥಶಾಸ್ತ್ರಜ್ಞರು ಈ ದರವನ್ನು ಶೇ.7ಕ್ಕೆ ಸೀಮಿತಗೊಳಿಸಿದ್ದಾರೆ. ಉತ್ಪಾದನಾ, ನಿರ್ಮಾಣ ಮತ್ತು ಆಯ್ದ ಸೇವೆಗಳಲ್ಲಿ ಉಂಟಾಗಿರುವ ನಿಧಾನಗತಿ 2018-19ರಲ್ಲಿ ಬೆಳವಣಿಗೆ ಕುಂಠಿತವಾಗಲು ಪ್ರಮುಖ ಕಾರಣವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಿಸಿದ್ದಾರೆ. ನಿಜವಾದ ಜಿವಿಎ ಅಥವಾ ಮೂಲ ನಿರಂತರ ದರಗಳಲ್ಲಿ ಒಟ್ಟಾರೆ ಮೌಲ್ಯವರ್ಧಿತ ಕೂಡಿಕೆಯು 2018-19ರಲ್ಲಿ ಶೇ.7.0 ತಲುಪುವ ನಿರೀಕ್ಷೆಯಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ ಈ ದರ ಶೇ.6.5 ಇತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News