ಜ. 9 ರಿಂದ ಬೊಳ್ಳಾಯಿಯಲ್ಲಿ ಕತುಬಿಯ್ಯತ್ ಕಮಿಟಿ ವಾರ್ಷಿಕೋತ್ಸವ

Update: 2019-01-07 17:34 GMT

ವಿಟ್ಲ, ಜ. 7: ಬೊಳ್ಳಾಯಿ ಬದ್ರಿಯಾ ಜುಮಾ ಮಸೀದಿ ಅಧೀನದ ಖುವ್ವತುಲ್ ಇಸ್ಲಾಂ ಕುತುಬಿಯ್ಯತ್ ಕಮಿಟಿಯ 40ನೇ ವಾರ್ಷಿಕೋತ್ಸವದ ಅಂಗವಾಗಿ 3 ದಿನಗಳ ಧಾರ್ಮಿಕ ಉಪನ್ಯಾಸ, ಮುಹಿಯುದ್ದೀನ್ ಮಾಲಾ ಆಲಾಪನೆ ಹಾಗೂ ಬುರ್‍ದಾ ಮಜ್ಲಿಸ್ ಕಾರ್ಯಕ್ರಮ ಜನವರಿ 9 ರಿಂದ 12ರವರೆಗೆ ನಡೆಯಲಿದೆ. 

ಸಯ್ಯಿದ್ ಯು.ಎಸ್. ಹಮೀದ್ ತಂಙಳ್ ಉದ್ಯಾವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಬೊಳ್ಳಾಯಿ ಮಸೀದಿ ಖತೀಬ್ ಅಬ್ಬಾಸ್ ಸಅದಿ ಅಲ್-ಅಫ್ಳಲಿ  ಉದ್ಘಾಟಿಸುವರು. 

ಧಾರ್ಮಿಕ ಪ್ರವಚನ ಕಾರ್ಯಕ್ರಮಗಳಲ್ಲಿ  ಬಿ.ಎಂ. ಉಮರ್ ಮುಸ್ಲಿಯಾರ್ ಮರ್ದಾಳ, ಇಸ್ಹಾಕ್ ಸಖಾಫಿ ಮರಕಡ, ಪಿ.ಎಂ. ಉಮರುಲ್ ಫಾರೂಕ್ ಸಖಾಫಿ ಕೃಷ್ಣಾಪುರ ಅವರು ಉಪನ್ಯಾಸಗೈಯುವರು. 

ಜ. 12 ರಂದು ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಸಯ್ಯಿದ್ ಯು.ಎಸ್. ಶಿಹಾಬುದ್ದೀನ್ ತಂಙಳ್ ಉದ್ಯಾವರ ಅವರ ನೇತೃತ್ವದಲ್ಲಿ ಕುತುಬಿಯ್ಯತ್ ಹಾಗೂ ದುವಾ ನಡೆಯಲಿದ್ದು, ಸಯ್ಯಿದ್ ತ್ವಾಹಾ ಸಖಾಫಿ ಅಲ್-ಹೈದ್ರೋಸಿ ತಂಙಳ್ ಮಲಪ್ಪುರಂ ಹಾಗೂ ಸಂಗಡಿಗರಿಂದ ಮುಹಿಯುದ್ದೀನ್ ಮಾಲೆ ಆಲಾಪಣೆ ಹಾಗೂ ಬುರ್‍ದಾ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ.

ಇದೇ ವೇಳೆ ಕುತುಬಿಯ್ಯತ್ ಕಮಿಟಿ ಸ್ಥಾಪಕ ಸದಸ್ಯರುಗಳಾದ ಸಯ್ಯಿದ್ ಯು.ಎಸ್. ಹಮೀದ್ ತಂಙಳ್ ಉದ್ಯಾವರ, ಬಿ.ಎ. ಮುಹಮ್ಮದ್, ಜಿ. ಇಬ್ರಾಹಿಂ ಅವರನ್ನು ಸನ್ಮಾನಿಸಲಾಗುವುದು ಎಂದು ಕುತುಬಿಯ್ಯತ್ ಕಮಿಟಿ ಅಧ್ಯಕ್ಷ ಹಾಜಿ ಬಿ.ಎಸ್. ಅಬೂಬಕ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News