×
Ad

ಬೋಟು ಸಹಿತ ಮೀನುಗಾರರ ನಾಪತ್ತೆ ಪ್ರಕರಣ: ಮೀನುಗಾರಿಕೆಗೆ ತೆರಳಲು ಕಾರ್ಮಿಕರ ಹಿಂದೇಟು

Update: 2019-01-08 21:24 IST

ಉಡುಪಿ, ಜ. 8: ನಾಪತ್ತೆಯಾಗಿರುವ ಬೋಟು ಸಹಿತ ಏಳು ಮಂದಿ ಮೀನುಗಾರರು ಈವರೆಗೆ ಪತ್ತೆಯಾಗದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಕಾರ್ಮಿಕರು ಬಾರದ ಕಾರಣ ಬಹುತೇಕ ಆಳಸಮುದ್ರ ಮೀನು ಗಾರಿಕಾ ಬೋಟುಗಳು ಮೀನುಗಾರಿಕೆಗೆ ತೆರಳದೆ ಮಲ್ಪೆ ಬಂದರಿನಲ್ಲಿ ಉಳಿದು ಕೊಂಡಿದೆ.

ಆದರೆ ತಮಿಳುನಾಡು ಮೂಲದ ಮೀನುಗಾರ ಕಾರ್ಮಿಕರನ್ನು ಹೊಂದಿ ರುವ ಸುಮಾರು 50 ಬೋಟುಗಳು ನಿನ್ನೆ ರಾತ್ರಿಯೇ ಆಳ ಸಮುದ್ರ ಮೀನು ಗಾರಿಕೆಗೆ ಹೊರಟಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರ್ಮಿಕರು ಸಭೆ ಕರೆದು ತೀರ್ಮಾನಿಸಿದ ಬಳಿಕವಷ್ಟೆ ಮೀನುಗಾರಿಕೆಗೆ ತೆರಳು ವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ.

ಮೂಲದ ಪ್ರಕಾರ ಜ.11ರಂದು ಉತ್ತರ ಕನ್ನಡ ಜಿಲ್ಲೆಯ ಕಾರ್ಮಿಕರು ಮೀನುಗಾರಿಕೆ ತೆರಳುವ ಬಗ್ಗೆ ತಿಳಿದುಬಂದಿದೆ. ಉತ್ತರ ಕನ್ನಡ ಕಾರ್ಮಿಕರ ಮುಷ್ಕರದ ಕುರಿತು ಪ್ರತಿಕ್ರಿಯಿಸಿದ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ‘ನಾಪತ್ತೆಯಾದ ಮೀನು ಗಾರರ ಪತ್ತೆಗೆ ನಾವು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಸಂಘದ ವತಿಯಿಂದ ನಿಸ್ವಾರ್ಥ ಕಾರ್ಯ ನಡೆಯು ತ್ತಿದೆ. ಆದರೆ ಯಾರು ಕೂಡ ಈ ಬಗ್ಗೆ ಸಂಶಯ ಪಡಬಾರದು’ ಎಂದು ತಿಳಿಸಿದರು.

ಮೀನುಗಾರರ ಸಂಘ ತೆಗೆದುಕೊಂಡ ತೀರ್ಮಾನದಂತೆ ನಿನ್ನೆ ರಾತ್ರಿ ಯಿಂದಲೇ ಬೋಟುಗಳು ಹೊರಬೇಕಾಗಿತ್ತು. ಆದರೆ ಉತ್ತರ ಕನ್ನಡ ಜಿಲ್ಲೆಯ ಕಾರ್ಮಿಕರು ಆಗಮಿಸದ ಹಿನ್ನೆಲೆಯಲ್ಲಿ ಬೋಟುಗಳು ಮೀನುಗಾರಿಕೆಗೆ ತೆರಳಲು ಸಾಧ್ಯವಾಗಿಲ್ಲ. ಕೆಲವೊಂದು ಬೋಟುಗಳು ಮಾತ್ರ ಮೀನುಗಾರಿಕೆಗೆ ತೆರಳಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News