×
Ad

ಅಖಿಲ ಭಾರತ ಮುಷ್ಕರ: ಜೆಸಿಟಿಯು ಪ್ರತಿಭಟನಾ ಪ್ರದರ್ಶನ

Update: 2019-01-08 21:50 IST

ಮಂಗಳೂರು, ಜ.8: ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ(ಜೆಸಿಟಿಯು) ನೇತ್ರತ್ವದಲ್ಲಿ ಅಖಿಲ ಭಾರತ ಮಹಾಮುಷ್ಕರದ ಅಂಗವಾಗಿ ಮಂಗಳವಾರ ಬೆಳಗ್ಗೆ ದ.ಕ.ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ಜರುಗಿತು.

ಪ್ರತಿಭಟನೆಯಲ್ಲಿ ಇಂಟಕ್ ಜಿಲ್ಲಾ ನಾಯಕರಾದ ಮನೋಹರ್ ಶೆಟ್ಟಿ, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಸಿಐಟಿಯು ಜಿಲ್ಲಾ ನಾಯಕರಾದ ವಸಂತ ಆಚಾರಿ, ಜೆ.ಬಾಲಕ್ರಷ್ಣ ಶೆಟ್ಟಿ, ಸುನೀಲ್‌ಕುಮಾರ್ ಬಜಾಲ್, ಎಐಟಿಯುಸಿ ಜಿಲ್ಲಾ ನಾಯಕರಾದ ಎಚ್.ವಿ.ರಾವ್, ವಿ.ಕುಕ್ಯಾನ್, ಕರುಣಾಕರ್ ಸೇರಿದಂತೆ ಬ್ಯಾಂಕ್, ವಿಮೆ, ಬಿಎಸ್ಸೆನ್ನೆಲ್, ಆರ್‌ಎಂಎಸ್ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News