×
Ad

ತುಳು ಸಾಹಿತ್ಯ ಅಕಾಡಮಿಯಿಂದ ಹೆಚ್ಚು ಪುಸ್ತಕ ಪ್ರಕಟ: ಡಾ. ಬಿ.ಎ. ವಿವೇಕ ರೈ

Update: 2019-01-08 22:08 IST

ಮಂಗಳೂರು, ಜ.8: ತುಳು ಸಾಹಿತ್ಯ ಅಕಾಡಮಿಯಿಂದ ಇತ್ತೀಚಿನ ದಿನಗಳಲ್ಲಿ ಪುಸ್ತಕಗಳು ಹೆಚ್ಚು ಪ್ರಕಟಿತಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ವಿಶ್ರಾಂತ ಉಪಕುಲಪತಿ ಡಾ. ಬಿ.ಎ. ವಿವೇಕ ರೈ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯಿಂದ ಅಕಾಡಮಿ ಪ್ರಕಟಿತ 5 ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ತುಳು ಸಾಹಿತ್ಯ ಕೃತಿಗಳ ತುಣುಕುಗಳು ಅಂತರ್ಜಾಲ ಮೂಲಕ ಪ್ರಕಟವಾದಾಗ ಇದು ಒಬ್ಬರಿಂದೊಬ್ಬರು ಶೇರ್ ಮಾಡಿದಾಗ ಹೆಚ್ಚು ಜನರನ್ನು ತಲುಪಲು ಸಾಧ್ಯ. ಈ ನಿಟ್ಟಿನಲ್ಲಿ ತುಳು ಸಾಹಿತ್ಯ ಅಕಾಡಮಿ ಹೆಚ್ಚು ಆಸಕ್ತಿ ವಹಿಸಿ ಕೆಲಸ ಮಾಡಿದಾಗ ತುಳು ಸಾಹಿತ್ಯ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಡಾ. ಬಿ.ಎ. ವಿವೇಕ ರೈ ಅಭಿಪ್ರಾಯಪಟ್ಟರು.

ತುಳು ಸಾಹಿತ್ಯ ಬೆಳವಣಿಗೆಯಾಗಬೇಕಾದರೆ ಅನ್ಯ ಸಾಹಿತ್ಯದ ಬಗ್ಗೆಯೂ ನಾವು ವಿಶೇಷ ಆಸಕ್ತಿ ವಹಿಸಿ ಅಧ್ಯಯನ ಮಾಡಬೇಕು. ಈ ನಿಟ್ಟಿನಲ್ಲಿ ಅಕಾಡಮಿಗಳು ಆಯಾ ಕ್ಷೇತ್ರಗಳ ಅಧ್ಯಯನ, ಸಾಹಿತ್ಯ ಕೃಷಿ ಮಾಡಿದಾಗ ಸಾಹಿತ್ಯ ತನ್ನಿಂತಾನೆ ಬೆಳೆಯುತ್ತದೆ. ಸಾಹಿತ್ಯದ ಮೂಲಕ ಜಗತ್ತಿಗೆ ಭಾಷೆ, ಸಂಸ್ಕಾರದ ಪರಿಚಯಿಸಲು ಸಾಧ್ಯವಾಗುತ್ತದೆ. ಕರ್ವಾಲೊ ತುಳು ಕೃತಿ ಅದ್ಭುತವಾಗಿದ್ದು, ಈಗಾಗಲೇ ಹಿಂದಿ, ಇಂಗ್ಲೀಷ್ ಹಾಗೂ ಜರ್ಮನಿ ಭಾಷೆಗೆ ತರ್ಜುಮೆಯಾಗಿದೆ ಎಂದರು.

ತುಳು ಅಧ್ಯಾತ್ಮ ರಾಮಾಯಣ ಬಗ್ಗೆ ಡಾ. ವಾಮನ ನಂದಾವರ ಮಾತನಾಡಿ, ಕೃತಿಯುದ್ದಕ್ಕೂ ರಾಮಾಯಣದ ಆಯಾಮಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದೆ ಎಂದರು.

ಕಾರ್ಯಕ್ರಮದಲ್ಲಿ ಪುಸ್ತಕದ ಅನುವಾದಕರಾದ ಡಾ.ಕೆ.ಎಂ. ರಾಘವ ನಂಬಿಯಾರ್, ಲೇಖಕ ಡಾ. ನರೇಂದ್ರ ರೈ ದೆರ್ಲ, ಸಂಪಾದಕ ಭಾಸ್ಕರ್ ರೈ ಕುಕ್ಕುವಳ್ಳಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ. ಭಂಡಾರಿ, ತುಳು ಸಾಹಿತ್ಯ ಅಕಾಡಮಿ ಸದಸ್ಯ ಸಂಚಾಲಕ ಪ್ರಭಾಕರ ನೀರುಮಾರ್ಗ, ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಉಪಸ್ಥಿರಿದ್ದರು. ಡಾ. ವಾಸುದೇವ ಬೆಳ್ಳೆ ಕಾರ್ಯಕ್ರಮ ನಿರೂಪಿಸಿದರು. ಬೆನೆಟ್ ಜಿ. ಅಮ್ಮನ್ನ ವಂದಿಸಿದರು.

ತುಳು ಸಂಸ್ಕೃತಿ ತೆರೆದಿಟ್ಟ ಪಡವುದಪ್ಪೆನ ಪಾರ್ದನ

ಪಡವುದಪ್ಪೆನ ಪಾರ್ದನ ಮತ್ತು ಸಂತ ಶಿಶುನಾಳ ಷರೀಫರ ತತ್ವ ಪದೊಕುಲು ಪುಸ್ತಕ ಬಿಡುಗಡೆ ಮಾಡಿದ ಮಂಗಳೂರು ವಿವಿಯ ಪ್ರೊ. ಅಭಯ ಕುಮಾರ್ ಮಾತನಾಡಿ, ಪಡವುದಪ್ಪೆನ ಪಾರ್ದನ ತುಳುನಾಡಿನ ನೆಲದ ಸಂಸ್ಕತಿ, ಬದುಕನ್ನು ತೆರೆದಿಟ್ಟಿದೆ. ತುಳುನಾಡಿನ ಅಳಿವಿನಂಚಿನ ಮೂಲ ಭಾಷೆಗಳು ಈ ಪಾಡ್ದನದಲ್ಲಿ ಎದ್ದು ಗೋಚರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News