×
Ad

ಉಡುಪಿ: ಬೋಟ್ ಸಹಿತ ಮೀನುಗಾರರ ಪತ್ತೆಗಾಗಿ ಇಸ್ರೋಗೆ ಮೊರೆ

Update: 2019-01-08 22:18 IST

ಉಡುಪಿ, ಜ.8: ಕಳೆದ 24 ದಿನಗಳಿಂದ ನಾಪತ್ತೆಯಾಗಿರುವ ಬೋಟ್ ಸಹಿತ ಏಳು ಮಂದಿ ಮೀನುಗಾರರ ಪತ್ತೆಗಾಗಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದ ಮೊರೆ ಹೋಗಿದೆ.

ಸುವರ್ಣ ತ್ರಿಭುಜ ಬೋಟನ್ನು ಉಪಗ್ರಹದ ಮೂಲಕ ಶೋಧ ನಡೆಸಲು ಈ ಮಾಹಿತಿಯನ್ನು ಇಸ್ರೋ, ಹೈದರಾಬಾದ್‌ ನ ಇಂಡಿಯನ್ ನ್ಯಾಷನಲ್ ಸೆಂಟರ್ ಫಾರ್ ಓಶಿಯನ್ ಇನ್ಫಾರ್ಮೇಶನ್ ಸಿಸ್ಟಮ್‌ (ಐಎನ್‌ಸಿಒಐಎಸ್) ಮತ್ತು ಬೆಂಗಳೂರಿನ ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್‌ಗೆ
ರವಾನಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಈ ಮಧ್ಯೆ ಡಿ.15 ರಿಂದ ಸಂಪರ್ಕಕ್ಕೆ ಸಿಗದೇ ಕಣ್ಮರೆಯಾಗಿರುವ ಬೋಟು ಸಹಿತ ಮೀನುಗಾರರನ್ನು ಹುಡುಕುವ ಕಾರ್ಯಾಚರಣೆಯನ್ನು ಕೋಸ್ಟ್ ಗಾರ್ಡ್ ಹಾಗೂ ನೌಕಾ ಪಡೆ ಮುಂದುವರಿಸಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News