ಮೇಲ್ಜಾತಿಯ ಬಡವರಿಗೆ ಮೀಸಲಾತಿ ‘ಸಂವಿಧಾನಕ್ಕೆ ಎಸಗಿರುವ ವಂಚನೆ’: ಅಸಾದುದ್ದೀನ್ ಒವೈಸಿ

Update: 2019-01-08 17:18 GMT

ಹೊಸದಿಲ್ಲಿ, ಜ.8: ಆರ್ಥಿಕವಾಗಿ ಹಿಂದುಳಿದಿರುವ ಮೇಲ್ಜಾತಿಯವರಿಗೆ ಮೀಸಲಾತಿ ನೀಡುವ ತಿದ್ದುಪಡಿ ಮಸೂದೆಯನ್ನು ಎಐಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ವಿರೋಧಿಸಿದ್ದು, ಮಸೂದೆಯು ಸಂವಿಧಾನಕ್ಕೆ ಎಸಗಿರುವ ವಂಚನೆಯಾಗಿದೆ ಎಂದಿದ್ದಾರೆ.

“ನಾನು ಈ ಮಸೂದೆಯನ್ನು ವಿರೋಧಿಸುತ್ತೇನೆ. ಇದು ಸಂವಿಧಾನಕ್ಕೆ ಎಸಗಿರುವ ವಂಚನೆಯಾಗಿದೆ. ಸಂವಿಧಾನವು ಆರ್ಥಿಕ ಹಿಂದುಳಿಯುವಿಕೆಯನ್ನು ಗುರುತಿಸುವುದಿಲ್ಲ. ಯಾವುದೇ ಪ್ರಾಯೋಗಿಕ ದತ್ತಾಂಶ ಮತ್ತು ಪುರಾವೆಯಿಲ್ಲದ ಕಾರಣ ಈ ನಡೆಯು ವಂಚನೆಯಾಗಿದೆ” ಎಂದವರು ಹೇಳಿದರು.

“ಇದು ರಾಜ್ಯಗಳಿಗೆ ಹೊರೆಯಾಗಲಿದೆ. ಮರಾಠಾ ಮೀಸಲಾತಿಗೆ ಏನಾಗಲಿದೆ ಎನ್ನುವುದನ್ನು ನಾನು ಸರಕಾರದಿಂದ ತಿಳಿದುಕೊಳ್ಳಬಹುದೇ?” ಎಂದವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News