ರಾಜ್ಯಮಟ್ಟದ ಚೆಸ್ ಸ್ಪರ್ಧೆ: ಆರುಷಿ ಡಿಸಿಲ್ವಾ ರನ್ನರ್‌ ಅಪ್

Update: 2019-01-10 14:10 GMT

ಮಂಗಳೂರು, ಜ.10: ಡೆರಿಕ್ಸ್ ಚೆಸ್ ಸ್ಕೂಲಿನ ಪ್ರತಿಭೆ ಆರುಷಿ ಎಸ್.ಎಚ್. ಡಿಸಿಲ್ವಾ ಇತ್ತೀಚೆಗೆ ಬೆಂಗಳೂರಿನಲ್ಲಿ ಇನ್ನವೇಟರ್ ಚೆಸ್ ಅಕಾಡಮಿಯು ರಾಜ್ಯ ಚೆಸ್ ಅಸೋಸಿಯೇಶನ್‌ನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಅಂತರ್ ಶಾಲಾ ಚೆಸ್ ಚಾಂಪಿಯನ್‌ಶಿಪ್‌ನ 9 ವರ್ಷದ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ಆರು ಸುತ್ತುಗಳಲ್ಲಿ 5 ಅಂಕಗಳಿಸಿ, ಶಂಜುಳಾ ಸೆಂಥಿಲ್ ಮತ್ತು ಶ್ರೀಯಾನಾ ಮಲ್ಯಾ ಜೊತೆ ಸಮಾನ ಅಂಕಗಳೊಂದಿಗೆ ಅಗ್ರಸ್ಥಾನದ ಗೌರವ ಹಂಚಿಕೊಂಡರು. ಪ್ರಥಮ ಸ್ಥಾನಿಯಾದ ಶಂಜುಳಾ ಸೆಂಥಿಲ್ ಜೊತೆ ಜಯ ಗಳಿಸಿದ್ದರೂ, ಟೈಬ್ರೇಕ್ ಅಂಕಗಳ ಆಧಾರದಲ್ಲಿ ದ್ವಿತೀಯ ಸ್ಥಾನಕ್ಕೆ ಆರುಷಿ ತೃಪ್ತಿ ಪಡಬೇಕಾಯಿತು.

ಆರುಷಿ ಡಿಸಿಲ್ವಾ ಅವರು ಮಂಗಳೂರಿನ ಕಾರ್ಮೆಲ್ ಸ್ಕೂಲಿನಲ್ಲಿ ಮೂರನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ದೇರೇಬೈಲ್‌ನ ಆನಂದ್ ಎಫ್.ಎಂ. ಡಿಸಿಲ್ವಾ ಹಾಗೂ ರೀಟಾ ಡಿಸೋಜ ದಂಪತಿಯ ಪುತ್ರಿ.

ಡೆರಿಕ್ಸ್ ಚೆಸ್ ಸ್ಕೂಲಿನ ಪ್ರತಿಭೆಗಳಾದ ರಿಮಾ ರಾವ್(ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆ, ಉಡುಪಿ) 7 ವರ್ಷದ ಬಾಲಕಿಯರ ವಿಭಾಗದಲ್ಲಿ ನಾಲ್ಕನೇ ಸ್ಥಾನ ಹಾಗೂ ಲಕ್ಷಿತ್ ಬಿ. ಸಾಲ್ಯಾನ್ (ಐಡಿಯಲ್ ಇಂಗ್ಲೀಷ್ ಮಾಧ್ಯಮ ಶಾಲೆ) 15 ವರ್ಷದ ಬಾಲಕರ ವಿಭಾಗದಲ್ಲಿ ಐದನೇ ಸ್ಥಾನ ಪಡೆದು ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News