ಸಿಎಫ್‍ಐ ರಾಷ್ಟ್ರೀಯ ಸಮಿತಿಗೆ ಪುತ್ತೂರಿನ ಮಿಸ್ರಿಯಾ ಆಯ್ಕೆ
Update: 2019-01-10 20:05 IST
ಪುತ್ತೂರು,ಜ.10: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಸಮಿತಿಯ ಸದಸ್ಯೆಯಾಗಿ ಪುತ್ತೂರಿನ ಮಿಸ್ರಿಯಾ ಅವರು ಆಯ್ಕೆಗೊಂಡಿದ್ದಾರೆ.
ಕೇರಳದ ಮಲಪ್ಪುರ ಜಿಲ್ಲೆಯ ಮಲಬಾರ್ ನಲ್ಲಿ ಕಳೆದ ಶನಿವಾರ ಮತ್ತು ಭಾನುವಾರ ನಡೆದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರತಿನಿಧಿಗಳ ಸಮಾವೇಶದಲ್ಲಿ ಮುಂದಿನ ಎರಡು ವರ್ಷದ ಅವಧಿಗೆ ನೂತನ ರಾಷ್ಟ್ರೀಯ ಸಮಿತಿಯನ್ನು ಆಯ್ಕೆ ಮಾಡಲಾಗಿದ್ದು, ಮಿಸ್ರಿಯಾ ಅವರು ರಾಷ್ಟ್ರೀಯ ಸಮಿತಿಗೆ ಆಯ್ಕೆಯಾದ ಕರ್ನಾಟಕದ ಏಕೈಕ ಮಹಿಳಾ ಪ್ರತಿನಿಧಿಯಾಗಿದ್ದಾರೆ.