ಮಂಗಳೂರು: ನ್ಯಾಯಾಧೀಶರಿಗೆ ಭಡ್ತಿ, ವರ್ಗಾವಣೆ
ಮಂಗಳೂರು, ಜ.10: ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ ಅವರಿಗೆ ಜಿಲ್ಲಾ ನ್ಯಾಯಾಧೀಶರಾಗಿ ಕರ್ನಾಟಕ ಹೈಕೋರ್ಟ್ ಭಡ್ತಿ ನೀಡಿದೆ.
ಮಲ್ಲನಗೌಡ ಅವರನ್ನು ದ.ಕ. ಜಿಲ್ಲಾ ನ್ಯಾಯಾಲಯದಲ್ಲಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ನೇಮಿಸಲಾಗಿದೆ.
ಮುಹಮ್ಮದ್ ಮುಜಾಹಿದ್ ಉಲ್ಲಾ: ದ.ಕ. ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಒಂದನೇ ಹೆಚ್ಚುವರಿ ಪ್ರಧಾನ ನ್ಯಾಯಾಧೀಶ ಮುಹಮ್ಮದ್ ಮುಜಾಹಿದ್ ಉಲ್ಲಾ ಅವರನ್ನು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ 5ನೇ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಸಾವಿತ್ರಿ ಭಟ್:
ಮಂಗಳೂರಿನ ಕಾರ್ಮಿಕ ನ್ಯಾಯಾಲಯದ ಪ್ರಧಾನ ಅಧಿಕಾರಿ ಸಾವಿತ್ರಿ ವೆಂಕಟರಾಮನ್ ಭಟ್ ಅವರನ್ನು ಮುಹಮ್ಮದ್ ಮುಜಾಹಿದ್ ಉಲ್ಲಾ ಅವರಿಂದ ತೆರವಾದ ದ.ಕ. ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಒಂದನೇ ಹೆಚ್ಚುವರಿ ಪ್ರಧಾನ ನ್ಯಾಯಾಧೀಶ ಸ್ಥಾನಕ್ಕೆ ನೇಮಿಸಲಾಗಿದೆ.
ನೇರಳೆ ವೀರಭದ್ರಯ್ಯ ಭವಾನಿ: ದ.ಕ. ಜಿಲ್ಲಾ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ಅವರನ್ನು ಸಾವಿತ್ರಿ ವೆಂಕಟರಾಮನ್ ಭಟ್ ಅವರಿಂದ ತೆರವಾದ ಮಂಗಳೂರಿನ ಕಾರ್ಮಿಕ ನ್ಯಾಯಾಲಯದ ಪ್ರಧಾನ ಅಧಿಕಾರಿ ಸ್ಥಾನಕ್ಕೆ ನೇಮಕ ಮಾಡಲಾಗಿದೆ.