2ನೇ ಅಮೆರಿಕ-ಉತ್ತರ ಕೊರಿಯ ಶೃಂಗಸಭೆಗೆ ಚೀನಾ ಬೆಂಬಲ

Update: 2019-01-10 17:00 GMT

ಬೀಜಿಂಗ್, ಜ. 10: ಉತ್ತರ ಕೊರಿಯದ ಪರಮಾಣು ನಿಶ್ಶಸ್ತ್ರೀಕರಣ ಪ್ರಯತ್ನಗಳು ಹಾಗೂ ಅಮೆರಿಕದೊಂದಿಗೆ ಅದು ನಡೆಸಲಿರುವ ಮಾತುಕತೆಗಳಿಗೆ ಚೀನಾ ಸಂಪೂರ್ಣ ಬೆಂಬಲ ನೀಡುತ್ತದೆ ಎಂಬ ಭರವಸೆಯನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್-ಉನ್‌ಗೆ ನೀಡಿದ್ದಾರೆ.

ಮಂಗಳವಾರ ಮತ್ತು ಬುಧವಾರ ಬೀಜಿಂಗ್‌ನಲ್ಲಿ ನಡೆದ ಮಾತುಕತೆಗಳ ವೇಳೆ ಚೀನಾ ಅಧ್ಯಕ್ಷರು ತನ್ನ ದೇಶದ ಈ ನಿಲುವನ್ನು ವ್ಯಕ್ತಪಡಿಸಿದ್ದಾರೆ ಎಂದು ಚೀನಾದ ಅಧಿಕೃತ ಸುದ್ದಿಸಂಸ್ಥೆ ಕ್ಸಿನುವಾ ವರದಿ ಮಾಡಿದೆ.

ತನ್ನ ಪರಮಾಣು ಕಾರ್ಯಕ್ರಮಗಳನ್ನು ಹಂತಹಂತವಾಗಿ ನಿಲ್ಲಿಸುವ ಉತ್ತರ ಕೊರಿಯದ ಭರವಸೆಗೆ ಪ್ರತಿಯಾಗಿ, ಆ ದೇಶದ ಮೇಲೆ ವಿಧಿಸಲಾಗಿರುವ ಆರ್ಥಿಕ ದಿಗ್ಬಂಧನಗಳನ್ನು ತೆರವುಗೊಳಿಸುವ ಬಗ್ಗೆ ಅಮೆರಿಕ ಪರಿಶೀಲಿಸಬೇಕೆಂದು ಚೀನಾ ಬಯಸುತ್ತದೆ ಎಂದು ಕ್ಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News